Sunday, July 20, 2025

ಬದುಕು – ಒಂದು ಪಾಠ

 ಮುಂಜಾನೆ ಬೆಳಗೆದ್ದು ಮನವು ಮುದುಡಿದರೆ

ನಿನ್ನಯ ಇಷ್ಟದ ಸಂಗೀತವ ಗುನುಗಿಕೋ,

ಮನವು ಜರ್ಜರಿತವಾಗಿ ವ್ಯಗ್ರವಾಗಿದ್ದರೆ

ಜೋರಾಗಿ ನಗು ನಿನ್ನಯ ಮೂರ್ಖತನಕೆ,

ಮನದಲಿ ಭಯ ಆವರಿಸಿದ್ದರೆ

ಧೈರ್ಯದಿಂ ಮುನ್ನುಗ್ಗು ಎದುರಿಸು,

ಮನವು ಬೇಜಾರಿನಲ್ಲಿ ತೊಳಲಾಡಿದರೆ

ಹೊರ ನಡೆ, ವಿಶಾಲ ಪ್ರಪಂಚವಿದೆ ನೋಡು,

ಕೌಶಲ್ಯವಿಲ್ಲದೆ ಸೊರಗಿದರೆ, ಹುಡುಕಾಡು

ಒಳ್ಳೆಯ ಸಮರ್ಥ ಗುರುವ ಮುನ್ನಡೆಸಲು,

ತಿಳಿವಿಲ್ಲದೆ ಗೊಂದಲ ಆವರಿಸಿದರೆ,

ತಿಳಿದವರ ಸಂಗವ ಮಾಡು, ತಿಳಿದು ಕೋ,

ಲೋಕದಲ್ಲಿ ಎಲ್ಲಕ್ಕೂ ಉತ್ತರವಿದೆ,

ಹುಡುಕಬೇಕಷ್ಟೇ!,ಛಲಬೇಕಷ್ಟೇ!

ಸಾಧಿಸುವವರೆಗೂ ನಿಲ್ಲಬಾರದಷ್ಟೇ

ಸತ್ತ ಮೇಲೆ ಮಲಗುವುದು ಇದ್ದೆ ಇದೆ,

ಬದುಕಿದ್ದಾಗ ಏನಾದರೂ ಸಾಧಿಸು,

ಏನಾದರೂ ಸಾಧಿಸು, ಉಸಿರು ನಿಲ್ಲುವ ಮುನ್ನ...

No comments:

Post a Comment

ಎದೆಯೊಳಗಿನ ಮೌನ

  ಎದೆಯಲಿಂದೇಕೋ ಮೋಡ ಮುಸುಕಿದೆ , ಭಾವಭಾರ ಹೆಚ್ಚಾಗಿ ಕಣ್ಣ ನೀರು ಉಕ್ಕಿದೆ। ಬೇಡದ ನೆನಪುಗಳು ಮತ್ತೆ ಮತ್ತೆ ಮನವ ಕಾಡಿದೆ , ಎದೆಯ ತುಂತುರು ಹನಿ ಹ...