Saturday, July 12, 2025

ದಾರಿದೀಪ

 ಆಳವಿಲ್ಲದ ಭಾವ,

ಮುಗಿಲೆತ್ತರದ ಭಾವ,

ನಗುವೊಮ್ಮೆ, ಅಳುವೊಮ್ಮೆ,

ಬಳಲುವೆನು, ಬದಲಾಗುವೆನು,

ಪ್ರೀತಿಸುವೆನು, ದೂರ ತಳ್ಳುವೆನು,

ಸವಿಯುವೆನು, ದೂರ ಸರಿಯುವೆನು,

ಮನದೊಳ ಕಸವ ಒರೆಸು, ನಾಳೆಗೆ ಸಿದ್ಧನಾಗು

ನಿರಂತರ ಭರವಸೆಯೊಂದೇ ಬದುಕಿಗೆ ದಾರಿದೀಪ।।

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...