Saturday, July 12, 2025

ನಾಳೆ ಏನು?

 ಇಂದೇನೋ ಮುಗಿಯಿತು, ನಾಳೆ ಏನು?

ಬೆಳಕು ಮುಗಿದು ಕತ್ತಲ ಹೊಳೆ ಹರಿದಿದೆ;

ಇಂದೇನಾಯಿತು? ಅವಲೋಕಿಸು ಮಲಗುವ ಮುನ್ನ ;

ಪ್ರಶ್ನೆಗಳಿರಲಿ ಮನದಲ್ಲಿ ಅರಿವ ಸಂಶೋದಿಸು;

ನೂರು ಯೋಜನದ ಗುರಿಗೆ ಇಂದೇ ಅಡಿಯಿಡು;

ಪ್ರತಿದಿನವೂ ಕಲಿಕೆಗಿದೆ ಹೊಸ ಹಾದಿಯಿಲ್ಲಿ;

ನಾಳೆಗೆ ಇಂದೇ ಮುನ್ನುಡಿ ಬರೆಯಬೇಕಾಗಿದೆ;

ಪ್ರೀತಿಸು, ಧ್ಯಾನಿಸು, ಮೋಹಿಸು,ಅನುಭವಿಸು;

ಸಿಹಿ- ಕಹಿಯ ಸವಿ ಮಾಡುವ ಎಲ್ಲಾ ಕೆಲಸದಲ್ಲಿ;

ವಿವೇಕದಲಿ ಹೆಜ್ಜೆಯಿಡು ದಾರಿ ತೆರೆಯುವುದು;

ಮುಕ್ತ ಮನಸಿರಲಿ, ಭರವಸೆ ಮನದಲ್ಲಿರಲಿ;

ನಂಬಿಕೆ, ಪ್ರಾಮಾಣಿಕತೆ  ಪ್ರಯತ್ನದಲ್ಲಿರಲಿ;

ಇಂದೋ, ನಾಳೆಯೋ ಯಶಸ್ಸು ನಿನ್ನದೇ...

No comments:

Post a Comment

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...