ಕನಸು ಕಾಣಬೇಕು
ನನ್ನ ಕನಸು ಕಾಣಬೇಕು
ನಾ ಬಾನಲ್ಲಿ ಹಾರಾಡಬೇಕು
ಅದಕ್ಕೆ ನನಗೆ ರೆಕ್ಕೆಗಳು ಬೇಕು
ಬಾನಲ್ಲಿ ತೇಲಾಡಬೇಕು
ತೇಲಾಡುತ್ತಾ ಮೋಡದಿಂದಿಳಿಯುವ
ಮಳೆಯಾಗಬೇಕು
ಭುವಿಯ ಸೇರುವ ತವಕ
ಅನುಭವಿಸಬೇಕು
ಭುವಿಗಿಳಿಯುತ್ತಾ ಪ್ರಕೃತಿ
ಸೌಂದರ್ಯವ ಸವಿಯಬೇಕು
ಸೌಂದರ್ಯವ ಸವಿಯುತ್ತಾ ನಾನೇ
ಪ್ರಕೃತಿಯಾಗಬೇಕು
ತೇಲುವ ಹೂವಿನ ಸುಗಂಧವಾಗಬೇಕು
ತೇಲುತ್ತಾ,ಹಾರುತ್ತಾ ಹಕ್ಕಿಗಳ
ಕಲರವ ನಾನಾಗಬೇಕು
ಎಲ್ಲವೂ ನಾನಾಗಬೇಕು
ಹೃದಯ ಹೊಮ್ಮಿಬರಬೇಕು
ನಾನು ಕನಸಾಗಬೇಕು
ಕನಸು ನನಸಾಗಿಸುತ್ತಾ
ಸಾಯಬೇಕು।।
No comments:
Post a Comment