ನಮಗೆ ನಾವೇ ಪರಿಧಿಯ ಹಾಕಿಕೊಂಡರೆ
ಬಾವಿಯೇ ನಮಗೆ ಪ್ರಪಂಚವಾಗುವುದು
ಹೇಳಲು ಪದಗಳೇ ಇಲ್ಲವಾಗುವುದು||
ನಮಗೆ ನಾವೇ ಪರಿಧಿಯ
ಹಾಕಿಕೊಂಡರೆ
ನದಿಗಳು ಕೂಡ ಬಾರಿಯ
ಗೆರೆಗಳಾಗುವುದು
ವರ್ಣಿಸಲು ಕವನಗಳೇ
ಇಲ್ಲವಾಗುವುದು||
ನಮಗೆ ನಾವೇ ಪರಿಧಿಯ
ಹಾಕಿಕೊಂಡರೆ
ನಾವಿರುವ ಜಾಗವೇ
ಸೆರೆಮನೆಯಾಗುವುದು
ಇದ್ದು ಇಲ್ಲದ ಸ್ವಾತಂತ್ರ್ಯ
ನಮ್ಮದಾಗುವುದು||
ನಮಗೆ ನಾವೇ ಪರಿಧಿಯ
ಹಾಕಿಕೊಂಡರೆ
ಬದುಕಿದ್ದೂ ಜೀವಂತ
ಶವದಂತಿರಬಹುದು
ಅಗಾಧ ಶಕ್ತಿಯ ಬಳಸದೆ
ವ್ಯರ್ಥವಾಗಿ ಸಾಯಬಹುದು।।
ಪರಿಧಿಯ
ಹಾಕಿಕೊಳ್ಳಲೂಬಹುದು
ಪರಿಧಿಯ ದಾಟಲೂಬಹುದು
No comments:
Post a Comment