ಓಹ್! ಇವತ್ತು ಹೊಸ
ಗದ್ದುಗೆಗೆ
ನಾಯಕನ
ಪಟ್ಟಾಭಿಷೇಕ
ಸಾಕಷ್ಟು ಗ್ಯಾರಂಟಿ
ಭರವಸೆಗಳ
ಹರಿಸಿ
ಇಪ್ಪತ್ತು ದಿನ
ಬೆವರು
ಹರಿಸಿ
ಎದುರಾಳಿಯನ್ನ ಪಂದ್ಯದಲ್ಲಿ
ಮಣ್ಣು
ಮುಕ್ಕಿಸಿಯಾಗಿದೆ
ಎಲ್ಲೆಲ್ಲೂ ವಿಜಯ
ನರ್ತನವಾಗಿದೆ
ಇಲ್ಲಿಯವರೆಗೂ ಬುಸುಗುಡುತ್ತಿದ್ದ ಹಾವುಗಳು
ಬಿಲ
ಸೇರಿವೆ
ಇನ್ನು ಮುಂದೆ
ಮುಂಗುಸಿಯದೇ
ಅಧಿಕಾರದ
ಕಾರುಬಾರು
ವಿರೋಧಿಗಳ ವಿರೋಧಿಗಳು
ಗುಟುರು
ಹಾಕುತ್ತಿದ್ದಾರೆ
ನೆರೆಹೊರೆಯ ದೇಶದ
ಧ್ವಜ
- ಜಯಘೋಷ
ಮುಗಿಲುಮುಟ್ಟಿದೆ
ನಾಯಕರುಗಳಲ್ಲೇ ಕುತೂಹಲ
ಯಾರು ನಮ್ಮ
ಪರಮೋಚ್ಚ
ನಾಯಕ
?
ಒಳ ಸುಳಿಗಳಲ್ಲಿ
ಕಟ್ಟಿ
ಮಸೆಯುವ
ಸದ್ಧು
ಕಿರಿದಾಗಿ
ಕೇಳುತ್ತಿದೆ!
ಅಧಿಕಾರ ಲಾಲಸೆ
, ಆಸೆ
- ಅತ್ಯಾಸೆಗಳು
ಬೆಲೆಗಳಂತೆ
ಗಗನಕ್ಕೇರುತ್ತಿದೆ
ಮೋಡ ಚದುರಿ
ಹೊಸ
ಬೆಳಕು
ಬರುವುದೇ?
ನೆರೆಹೊರೆಯ ರಾಜ್ಯದ
ಕಥೆ
ಎಲ್ಲೆಲ್ಲೂ
ಹೆಸರು
ಮಾಡುತ್ತಿದೆ!
ಇಲ್ಲಿಯ ಕಥೆಯೇನು?
ಮನದಲ್ಲಿ ಭಯದ
ಛಾಯೆ!
ನಾಳೆಯ ಭರವಸೆಗೆ
ಜೀವ
ಕೊಡುವ
ತಾಯಿ
ಪ್ರಸವದ
ನೋವು
ತಿನ್ನುತ್ತಿದ್ದಾಳೆ
ನಾಳೆಯ ಅಳುವಿನ
ಸದ್ದು
ಜನನದ್ದೋ ? ಮರಣದ್ದೋ
?
ತಿಳಿಯಲು ಸಮಯ
ಕಾಯಬೇಕಾಗಿದೆ.......
No comments:
Post a Comment