ಸ್ವಾತಂತ್ರ್ಯಕ್ಕಾಗಿ ನಡೆ :
ಕೆಲವರೆಂದರು ನಮಗದು ದೊರಕದು
ನನ್ನ ನಂಬಿಕೆ ಏನೆಂದರೆ
'ಜನರು ನಾಣ್ಯದ ಮತ್ತೊಂದು
ಮುಖವನ್ನು ಕಂಡಾಗ'
'ಎಲ್ಲೇ ಅನ್ಯಾಯವಾದಾರೂ ಅದು
ಎಲ್ಲೆಡೆಯ ನ್ಯಾಯಕ್ಕೆ ಅವಮಾನ'
ಘೋಷಣೆಗಳ ಕೂಗುವರು ,
ವಸ್ತುಗಳ ಎಸೆಯುವರು
ಆದರೆ ನನ್ನ ಹೋರಾಟವನೆಂದೂ
ನಿಲ್ಲಿಸುವುದಿಲ್ಲ;
ಸ್ವಾತಂತ್ರ್ಯಕ್ಕಾಗಿ ನಿಲ್ಲದೆ
ನಡೆದೆ ರಾತ್ರಿ-ಹಗಲೆನ್ನದೆ
ಪೊಲೀಸರು ಕೂಗುವರು ಹಾಗೂ
ನಮ್ಮನ್ನು ರಸ್ತೆಗಳಲ್ಲಿ
ತಡೆಯುವರು
ಜನರಿಗೆ ಆಜ್ಞಾಪಿಸುವರು
'ಹಿಂದೆ ಹೋಗಿ'
ಗುಂಪು ಗುಂಪು ಜನರು ನಮ್ಮ ಮುಖದ
ಮೇಲೆ
ಘೋಷಣೆಗಳ ಮೊಳಗಿಸುವರು;
ಅವರು ಹಿಡಿದ ಫಲಕಗಳು
ಹೇಳುತ್ತವೆ
" ಮುನ್ನಡೆಯಿರಿ, ನಿಲ್ಲದೆ
ಮುಂದುವರೆಯಿರಿ"
ಪ್ರೇರಣೆ:Freedom Walk
No comments:
Post a Comment