ಸಂಕಟ ಹಾಗು ಸಂತೋಷ
ಎರಡೂ ಜೀವನದ ಜೋಡೆತ್ತುಗಳು
ಎರಡೂ ಬೆಸೆದಿದೆ ಬಿಡಿಸಲಾಗದ
ನಂಟು
ಈ ಮನುಷ್ಯ ಜೀವಕೆ
ದೇವಾ ಹೊದಿಸಿದ ಬಟ್ಟೆ
ಪ್ರತಿಯೊಂದು ಸಂತೋಷ ಹಾಗೂ ಸಂಕಟ
ಜೀವನದೊಂದಿಗೆ ಸೂಕ್ಷ್ಮ
ದಾರದಿಂದ ಬೆಸೆದಿದೆ
ಅದು ಹಾಗಿದ್ದರೇನೇ ಚಂದ
ಮನುಷ್ಯ ಭೂಮಿಗೆ ಬಂದುದೇ
ಸಂತೋಷ ಹಾಗೂ ಸಂಕಟ ಎರಡನ್ನೂ
ಅನುಭವಿಸಲು
ಇದನ್ನು ತಿಳಿದಾಗ ಮಾತ್ರ
ಜೀವನ ಸುಗಮ ಹಾದಿಯಲ್ಲಿ
ಸಾಗುವುದು\\
ಪ್ರೇರಣೆ: Joy
No comments:
Post a Comment