Saturday, January 31, 2026

ಮಧುರ ಯಾನ

ಹೊರಟೆವಾನಂದದಿ ಪ್ರಕೃತಿ ಮಡಿಲಿಗೆ,

ಸ್ನೇಹಿತರು, ಗೆಳೆತನದ ದೆಸೆಯಿಂದ ಮುದದಿ,

ದೂರದ ತಾಯ ಮನೆಗೆ, ತವರು ಮನೆಯಂತ ಗುಡಿಗೆ,

ಮುಗ್ದ ಮನಗಳು, ಐವತ್ತರ ಹರೆಯ ಗೆಳೆತನಕೆ,

ತಾರುಣ್ಯದ ಹರೆಯದಲ್ಲಿ ಕಂಡ ಮುಖಗಳವು,

ಜೀವನದ ಕಷ್ಟ,ಸುಖ, ನೋವು-ನಲಿವುಗಳ ಉಂಡೆವು,

ಬದುಕ ಲೀಲೆಗೆ ಬಾಗಿ ಏಳುವವರು ನಾವು,

ಕೊನೆಯ ಅರಿವಿದೆ ಇಂದಲ್ಲ, ನಾಳೆ ನಮ್ಮ ಸರದಿ,

ಮಧುರ ನೆನಪುಗಳ ಆಸರೆಯಲ್ಲಿ ಹೆಜ್ಜೆ ಇಡುವ,

ನಾಳೆಗಳು ಬರಲಿ, ನೆನಪುಗಳು ಉಳಿಯಲಿ.

No comments:

Post a Comment

ಜೀವನದ ಹಾದಿ

ಮಗನೇ , ನಾನು ನಿನಗೆ ಹೇಳುವೆ : ನನ್ನ ಜೀವನವು ಹೂವಿನ ಹಾಸಿಗೆ ಆಗಿರಲಿಲ್ಲ . ಅದರಲ್ಲಿ ನೋವಿನ ಒರತೆಗಳಿವೆ , ಕನಸಿನ ಚೂರುಗಳಿವೆ , ಹೃದಯದಲ್ಲಿ ಹರಿದುಹ...