ಜೀವನದ ಪ್ರತಿ ಹೆಜ್ಜೆಯಲಿ ಪಾಠವಿದೆ,
ಜೀವನದ
ಪ್ರತಿ ಮುಖದಲಿ ಸಂದೇಶವಿದೆ.
ಗೆಲುವು
ಕಂಡವರು ಸ್ಫೂರ್ತಿಯ ದೀಪ,
ನ್ಯೂನತೆ
ಹೊಂದಿರುವವರು ಎಚ್ಚರಿಕೆ.
ಸಂತೋಷ
ಹಂಚಿದವರು ಹರ್ಷದ ದಾರಿ,
ದುಃಖ
ಅನುಭವಿಸಿದವರು ಕೃತಜ್ಞತೆಯ ಪಾಠ.
ದಯೆಯ
ಹೃದಯದವರು ಕರುಣೆಯ ಗೀತೆ,
ಕೊಂಕು ಮಾತುಗಳನಾಡುವವರು
ಸಹನೆಯ ಪಾಠ.
ಜೀವನವೇ
ಒಂದು ದೊಡ್ಡ ಪಾಠಶಾಲೆ,
ಪ್ರತಿ
ಜೀವಿಯೂ ಗುರುವು ಇಲ್ಲಿ.
ಕಲಿಯುವ
ಒಳಮನಸ್ಸು ಕಣ್ತೆರೆದರೆ,
ಪ್ರತಿ
ಕ್ಷಣವೂ ಮನ್ನೋಲ್ಲಾಸ, ಜೀವನ ಪಾಠ.
No comments:
Post a Comment