Saturday, January 3, 2026

ವಂದಿಸುವೆವು ತಾಯೆ!

ವಂದಿಸುವೆವು ತಾಯೇ, ಅನವರತ

ವಂದಿಸುವೆವು ತಾಯೇ!

 

ಪ್ರಾಣ ನೀಡಿದವಳು ನೀನು,

ತ್ರಾಣ ನೀಡುವವಳು ನೀನು,

ರಕ್ಷಿಸಿ ಸಲಹುವವಳು ನೀನು,

ಮಾನ, ಸಮ್ಮಾನವು ನೀನು.

 

ಬೆಳದಿಂಗಳು ನೀನೇ,

ಸುಪ್ರಭಾತದ ಕಿರಣವು ನೀನೇ,

ಹೂಗಳೂ ನೀನೇ,

ಭ್ರಮರವೂ ನೀನೇ.

 

ತರುಲತೆಗಳೂ  ನೀನೇ,

ತುರು ಕರುಗಳೂ ನೀನೇ,

ಹಕ್ಕಿಗಳ ಕಲರವವೂ ನೀನೇ,

ತಂಗಾಳಿಯ ಮಧುರತೆಯೂ ನೀನೇ.

 

ನಗುಮೊಗದವಳು ನೀನು,

ಮಧುರ ಮಾತಿನವಳು ನೀನು,

ಸುಖದಾತೆಯೂ ನೀನು,

ವರದಾತೆಯೂ ನೀನು.

 

ಸಹಸ್ರ ಕೋಟಿಗಳ ದನಿಯು ನೀನು,

ಸಹಸ್ರ ಕರಶಸ್ತ್ರ ಚಲನೆಯು ನೀನು,

ಸಶಕ್ತ, ಸಬಲಳು ನೀನು,

ಅಬಲೆಯರ ರಕ್ಷಕಳು ನೀನು.

 

ಶಕ್ತಿಶಾಲಿಯೂ ನೀನು,

ಅಭಯದಾಯಿನಿಯೂ ನೀನು,

ಅರಿಗಳ ಸಂಹಾರಕಳು ನೀನು,

ಶರಣಾದವರ ಕರುಣೆಯು ನೀನು.

 

ನೀನೇ ವಿದ್ಯೆ,

ನೀನೇ ಧರ್ಮ,

ನೀನೇ ಹೃದಯ,

ನೀನೇ ಆತ್ಮ, ಪ್ರಾಣವು.

 

ಬಾಹುಗಳಲ್ಲಿ ಅಡಗಿರುವ ಶಕ್ತಿ ನೀನು,

ಹೃದಯದಲ್ಲಿ ನೆಲೆಸಿರುವ ಭಕ್ತಿ ನೀನು,

ದೇಹ,ದೇಶ, ದೇವಾಲಯಗಳ ಪೂಜೆ ನೀನು,

ನಮ್ಮೆಲ್ಲರ ಆರಾಧ್ಯ ದೈವವು ನೀನು.

 

ದುರ್ಗೆಯು ನೀನೇ,

 ಲಕ್ಷ್ಮಿಯು ನೀನೇ,

ಸರಸ್ವತಿಯು ನೀನೇ,

ನಮ್ಮೆಲ್ಲರ ತಾಯಿಯು ನೀನೇ.

 

ಪರಿಶುದ್ಧಳು ನೀನು,

ಮಂಗಳಕರಳು ನೀನು,

ಸಮೃದ್ಧತೆಯು ನೀನು,

ಕರುಣೆಯ ಕಡಲು ನೀನು.

 

ಕಂದರ ಕಣಿವೆಯು ನೀನು,

ಗಿರಿ, ಪರ್ವತ ಶಿಖರವು ನೀನು,

ಹರಿಯುವ ತೊರೆ, ನದಿಯು ನೀನು,

ಹೃದಯಗಳಲ್ಲಿ ಚಿಮ್ಮುವ ಚೈತನ್ಯವು ನೀನು.

 

ವಂದಿಸಿವೆವು ತಾಯೆ! ಅನವರತ,

ಶಿರಸಾ ವಂದಿಸುವೆವು ತಾಯೆ!

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...