Tuesday, April 21, 2020

ಸಾಕಿನ್ನು ಎದ್ದೇಳು!

ಭಾರತೀಯನೇ! ಎದ್ದೇಳು ಸಾಕಿನ್ನು ಈ ಗಾಢ ನಿದ್ದೆ
ಶತಶತಮಾನಗಳ ಕುಂಭಕರ್ಣ ನಿದ್ದೆಯಿಂದೆದ್ದೇಳು!
ರಾಜ ಮಹಾರಾಜರುಗಳ ತಲೆಗಳುರುಳಿದವು ಈ ಧರೆಗೆ
ಕೋಟೆಕೊತ್ತಲಗಳು ಮಣ್ಣುಗೂಡಿದವು, ಸಾಕಿನ್ನು ಎದ್ದೇಳು ।।

ದುರುಳರು ಧಾಂಗುಡಿಯಿಟ್ಟರು ನಿನ್ನ ತಾಯ್ನಾಡಿಗೆ
ರುಧಿರ ಹರಿಯಿತು, ಶಿರಗಳುರುಳಿದವು ರಕ್ಷಣೆಗೈಯುತ್ತಾ
ಪರಂಗಿಯರು ದಾಳಿಗೈದರು ವ್ಯಾಪಾರದ ಸೋಗಿನಲಿ
ರಾಜ್ಯ ರಾಜ್ಯಗಳ ಉರುಳಿಸುತಾ ,ಸಾಕಿನ್ನು ಎದ್ದೇಳು ।।

ದೇಶಭಕ್ತರು ಪ್ರಾಣಗಳನೇ ಮುಡಿಪಾಗಿಟ್ಟರು ತಾಯಿಗೆ
ದೇಶಭಕ್ತರ ಸೋಗುಹಾಕಿದರು ಕೆಲರು ಮೊಸಳೆಕಣ್ಣೀರಿಡುತಾ
ನೂರಾರು ದೇಶಭಕ್ತರು ಕೊರಳನೊಡ್ಡಿದರು ಕುಣಿಕೆಗೆ
ಎದೆಯನೊಡ್ಡಿದರು ತುಪಾಕಿ ಗುಂಡಿಗೆ, ಸಾಕಿನ್ನು ಎದ್ದೇಳು ।।

ಮಂದಿರಗಳುರುಳಿದವು ಹಲವರ ತಣಿಸಲು ಕೆಲರಿಂದ
ದೇಶವೇ ಇಬ್ಬಾಗವಾಯಿತು ಧೂರ್ತರಿಂದ ಓಲೈಕೆಗೆ
ಇನ್ನೂ ನಿಂತಿಲ್ಲ ಓಲೈಕೆ ಸೋಗುಹಾಕುವ ರಾಜಕಾರಣಿ
ಧೂರ್ತ ನರಿಜನರ ಬೆಣ್ಣೆಮಾತುಗಳಿಂದ , ಸಾಕಿನ್ನು ಎದ್ದೇಳು ।।

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...