ನಿನ್ನ ಹುಡುಕುತಿರುವೆ ಕೃಷ್ಣಾ
ಎಲ್ಲಿರುವೆ ಹೇಳು ಕೃಷ್ಣಾ|
ಹುಡುಕದಾ ಗುಡಿಗಳಿಲ್ಲ
ಕಾಣದಾ ಗೋಪುರಗಳಿಲ್ಲ
ನಿನ್ನ ಗುರುತು ಎಲ್ಲಿಯೂ ನಾ ಕಾಣಲಿಲ್ಲ
ಕಾಲು ಸೊರಗಿದೆ ಮುಂದೇನು ಮುಂದೇನು ಕೃಷ್ಣಾ?
ಕಾಡು ಮೇಡುಗಳಲ್ಲಿ ಅಲೆದೆ
ತೀರ್ಥಕ್ಷೇತ್ರಗಳಲ್ಲಿ ಸುಳಿದೆ
ನಿನ್ನ ಹೋಲುವ ರೂಪವ ನಾ ಕಾಣಲಿಲ್ಲ
ಕಣ್ಣು ಮಂಜಾಗಿದೆ ಮುಂದೇನು ಮುಂದೇನು ಕೃಷ್ಣಾ?
ವೇದಗಳಲ್ಲಿ ಇರುವೆಯೆಂದರು
ಗೀತೆಯೇ ನೀನಾಗಿಹೆಯೆಂದರು
ಈ ಮನಸಿಗೆ ಬಾ ಎಂದು ಕರೆವೆ ನಿನ್ನ
ದಾರಿ ತೋರಿಸು ಬಾ ಕಾದಿಹೆನು ಕಾದಿಹೆನು ಕೃಷ್ಣಾ!
No comments:
Post a Comment