Friday, April 3, 2020
ಸಹಬಾಳ್ವೆಗೆ ಸಮರಸ ಭಾವ
ಅಶಾಂತಿ ಅಜ್ಞಾನವು ಜಗದಲಿ ಪಸರಿಸೆ ಅಂಧಕಾರವು
ದೈವೀಗುಣಂಗಳ ವೈಭವವೇ ಶಾಂತಿ,ಜ್ಞಾನದ ಸಂಕೇತವು।
ಹಗಲು-ರಾತ್ರಿ ಸಮತೋಲನದಲ್ಲಿರೆ ಶ್ರೇಯಸ್ಸು ಜೀವಿಗಳಿಗೆ
ಅರಿವು-ಆಚಾರಗಳು ನಡೆ-ನುಡಿಯಲ್ಲಿ ಬೆರೆತಿರಲದುವುವೆ ಪ್ರಗತಿಯು||
ಸತ್ಯ-ಧರ್ಮ ಗಳು ಮೇಲೈಸೆ ಜಯದ ಹಾದಿ ಸುಗಮವು
ದಿನನಿತ್ಯದಲಿ ಆದರ್ಶಗಳು ಅಡಕವಾಗಿರಡುವೆ ಸಾರ್ಥಕ್ಯವು।
ಸುಖವನ್ನೊಂದೇ ಬೆನ್ನತಿಹ ನಾವು ಕಂಡೆವು ಬರೀ ನೋವುಗಳೇ
ಸುಖ-ದುಃಖ ಸಮರಸ ತತ್ವಗಳ ಮರೆತಾಗಿದೆ ಬಾಳು ಬರೀ ಬರಡು||
ನಮ್ಮ-ನಮ್ಮ ನಡುವಿನ ಮುಕ್ತ ಮನಗಳ ಮುಚ್ಚಿಹೆವು
ಸ್ವಾರ್ಥತನದಲಿ ಅಹಂಮಿಕೆಯ ಆಡಂಬರ ಹೆಚ್ಚಾದವು|
ನಮ್ಮ-ನಾವು ಅರಿಯದೇ ಹೇಗೆ ತಾನೇ ನಮ್ಮ ಉದ್ಧಾರವಾಗುವುದು
ನಿಲ್ಲದ ಕಾಲಕೆ ಸಮನಾಗಿ ನಾವು ಬದಲಾಗಬೇಕು ಮನವ ತೆರೆದು||
ನಾನು ನಾನೆಂಬ ಅಹಂಭಾವದಿಂದಲೇ ಕುರುಡು
ಅರ್ಥವಿಲ್ಲದ ಮಾತಿಗಳಿಗಿಂತ ಮೌನವ ತಬ್ಬುವುದೇ ಲೇಸು|
ಉರಿಯುವ ದೀಪ ತಾನುರಿದು ಪರರ ಬಾಳ ಬೆಳಗುವ ತೆರದಿ
ಉರಿಯದ ದೀಪ ಬೇರೊಂದು ದೀಪವ ಬೆಳಗಬಲ್ಲುದೇ -ಬರಿ ವ್ಯರ್ಥ ಪ್ರಲಾಪ||
Subscribe to:
Post Comments (Atom)
ಈ ಸಮಯ
ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ . ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ . ಹಣ ಮತ್ತೆ ಸಂಪಾದಿಸಬಹುದು , ಸಮ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
No comments:
Post a Comment