ನಾಳೆಗಳು ನನ್ನದಾಗಲಿ

ಸಂಜೆ ಸೂರ್ಯ ಜಾರುತಿಹನು
ಕಣ್ಣ ಅಂಚ್ಚಿಂದ ಕಣ್ಣೀರು ಜಾರಿತು
ಸಮುದ್ರದ ಅಲೆಗಳು ಸಂತೖೆಸಿದವು
ಮಾತು ಹೊರಡದೆ
ಮರಳ ಮೇಲೆ ಗೀಚಿದೆ
ಹೇಳಲಾಗದ ಮಾತುಗಳ
ನೋವು,ಭಯ,ಹಿಂಜರಿಕೆ
ಗಾಳಿ ಬೀಸಲಿ
ಅಲೆಗಳು ದಾಳಿಯಿಡಲಿ
ಹೃದಯದ ಮಾತುಗಳು
ಅವನ ಬಳಿ ತಲುಪಲಿ
ಬೆಂದ ಹೃದಯ ಹಗುರವಾಗಲಿ
ಜೀವನ ಪ್ರೀತಿ ಹೆಚ್ಚಾಗಲಿ
ನಾಳೆಗಳು ನನ್ನದಾಗಲಿ

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...