ನಂಬಿಕೆ

ಎಲ್ಲವೂ ನಮ್ಮ ಜೊತೆಗೇ ಇರುವುದು
ಪರಿಸ್ಥಿತಿ ಬದಲಾಗುವುದು
ನೀನಿಲ್ಲಿ ಮುಖ್ಯ,ನಿನ್ನ ಪಾತ್ರ ನಿರ್ವಹಿಸು
ಪಾಠಗಳ ಕಲಿಯುತ್ತಲೇ
ನಾವಿಲ್ಲಿ ಬೆಳೆಯಬೇಕು
ನಂಬಿಕೆ ಇರಲಿ,ನಂಬಿಕೆ ಬರಲಿ
ಗೆಲ್ಲುವೆವು,ಗೆದ್ದೇ ಗೆಲ್ಲುವೆವು
ಆ ದಿನ ಮುಂದಿದೆ
ತಾಳ್ಮೆಯ ಶಕ್ತಿ ನಿನ್ನಲ್ಲಿರಲಿ
ನಿಲ್ಲದೇ ಮುಂದಿಡು ಹೆಜ್ಜೆ
ಎಲ್ಲವ ಸಂತೋಷದಿ ಅನುಭವಿಸುತಾ...

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...