ಬಾ ಜೊತೆಯಾಗಿ ಹೆಜ್ಜೆಹಾಕೋಣ
ಕೋಮಲ ಕೈಗಳಿಂದ ಕೈಹಿಡಿ
ನೂರು ಕಥೆಗಳ ಕೇಳುವ ತವಕ
ಮನದಲ್ಲೇನೋ ಮನೆಮಾಡಿದೆ ಪುಲಕ
ಮಾತುಗಳನ್ನಷ್ಟೇ ಕೇಳಬೇಕೆನಿಸಿದೆ
ಮಾತುಗಳ ಹಿಂದಿದೆ ಕಾಣದ ನೋವ ಕಡಲು
ಸವೆದ ಹಾದಿಯ ದಣಿವಿಲ್ಲದೆ ನಡೆದೆವು
ನೀ ಜೊತೆಯಿರಲದು ಅಮೃತಗಳಿಗೆ
ಮಾತುಗಳ ಮೇಲೆಯೇ ಗಮನ
ಎಷ್ಟು ಸುಂದರ ಮಾತುಗಳು
ರಾತ್ರಿಯ ನಿದ್ದೆಯಲ್ಲೂ ಮಾತಿನ ಒನಪು
ನೋವುಗಳೆಲ್ಲಾ ನನ್ನದಾಗಲೆಂಬ ಒಲವು
No comments:
Post a Comment