Thursday, November 30, 2017

ಜೀವನವೇ ಏನು ನೀನು?

ಜೀವನವೇ ಏನು ನೀನು?
ಗುಲಾಬಿ ದಳವೋ ಇಲ್ಲ ಮುಳ್ಳೋ?
ನಿರ್ಮಲ ಸರೋವರವೇ?
ಭೋರ್ಗರೆವ ಜಲಪಾತವೇ?
ಕಲ್ಲು ಮುಳ್ಳುಗಳ ಹಾದಿಯೇ?
ಅಂಕು ಡೊಂಕಿಲ್ಲದ ನೇರ ರಸ್ತೆಯೇ?
ನೇರ ಇಲ್ಲ ಕೊಂಕು ನುಡಿಯೋ?
ಕಣ್ಣೀರೋ ಇಲ್ಲ ಆನಂದಭಾಷ್ಪವೋ?
ಸ್ಪಷ್ಟವೋ ಇಲ್ಲ ಅಸ್ಪಷ್ಟ ಚಿತ್ರವೋ?
ಒಂದಂತೂ ನಿಜ ರಹಸ್ಯಗಳ ತೋರಣ
ಅವಕಾಶಗಳ ಸರಮಾಲೆ

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...