ದಾರಿ ತೋರೆನಗೆ ಗುರುವೇ
ಹೆಜ್ಜೆ ಮುಂದಿಡಲಾರದೆ
ದಾರಿ ಕಾಣದೆ ತೊಳಲುತ್ತಿರುವೆ
ಅನುದಿನವು ನಿನ್ನ ನೆನೆದು
ಅಡಿಯಿಡುತ್ತಿರುವೆ ದೈರ್ಯದಿ
ಇಂದೇಕೋ ಮನವು ನರಳಿದೆ
ನಿನ್ನ ಕನವರಿಕೆಯೊಂದೇ ಸಾಕಾಗಿದೆ
ಮನದ ತಿಮಿರವ ತೊಡೆದು
ದಾರಿ ತೋರೆನಗೆ,
ಅಡಿಗಡಿಗೆ ಚೈತನ್ಯ ನೀಡು
ದಾರಿ ಕಠಿಣ,ನಿನ್ನ ಪ್ರೀತಿಯೊಂದಿರೆ
ಎಲ್ಲವೂ ಸುಗಮ.. ..
ಕರುಣೆಯೊಂದಿರೆ ಎಲ್ಲ ಕಷ್ಟಗಳೂ
ಸಂತೋಷದ ಅನುಭವಗಳೇ....
No comments:
Post a Comment