ಮನಸೇ ಮನಸೇ
ಏಕೆ ನೆನಪ ಮಾಡುವೆ
ಆ ಕಹಿ ನೋವ
ಮನದ ಶಾಂತಿಯ ಕೆಣಕಿ
ಸಂತೋಷಿಸುವುದು ಸರಿಯೇ?
ಮತ್ತೆ ನೆನಪಾಗಿದೆ
ಮತ್ತೆ ನೆನಪಾಗಿದೆ
ಹಳೆಯ ನೋವುಗಳೆಲ್ಲಾ
ಒಂದಾಗಿ ಮನದ ಮೇಲೆ
ದಾಳಿ ಮಾಡಿದೆ
ನೆಮ್ಮದಿಯ ಕೆಡಿಸಿವೆ
ರಾತ್ರಿ ನಿದ್ದೆಯ ಕದ್ದೋಯ್ದಿವೆ
ಸಿಹಿಗನಸುಗಳ ಹರಣಮಾಡಿವೆ
ಮತ್ತೆ ನೆನಪಾಗಿವೆ
ಮತ್ತೆ ನೆನಪಾಗಿವೆ
ದಿಕ್ಕು ತೋಚದಂತೆ ಮಾಡಿವೆ
ಕಾಣದ ಕಡಲ ಆಸೆ ಬಿತ್ತಿದೆ
ಓ ಮನಸೇ, ಓ ಮನಸೇ
No comments:
Post a Comment