ಸಾಯಂಕಾಲ ಸಂತಸದ ಬುಗ್ಗೆಯಲ್ಲ
ವೇದನೆ ,ಅಸಹಾಯಕತೆ ನಗುವ ಕಾಲ
ಚೆೃತನ್ಯವ ಹೀರಿ ನರಳಿಸುವ ಕಾಲ
ನೀರವತೆಯ ಮೌನ ಚುಚ್ಚುವ ಕಾಲ
ಬದುಕು ಬೇಸರ ಮೂಡಿ ತೆರೆಯೆಳೆಯುವ ಕಾಲ
ಮರೆಯಾದವರ ನೆವದಲ್ಲಿ
ಮರೆಯಾಗುವವರ ವೇದನೆಯಲ್ಲಿ
ತೆವಳುತ್ತಾ ಕಾಲದೂಡವ ವ್ಯಥೆ
ಕಾಲವೇ ಹೊರೆಯೋ?
ನಾವೇ ಹೊರೆಯೋ?
ಸಂಧಿಗ್ದ ಸ್ಥಿತಿ,ಸಮಾದಿಯ ಕಾಲ
ತಿಥಿ,ಶ್ರಾದ್ಧಗಳು ಒಂದಾದ ಮೇಲೊಂದು
ಹೋಗಲಾರದೆ,ಇರಲೂ ಆಗದೆ
ಸರದಿಯಲ್ಲಿ ನಾನೂ ನಿಂತಿರುವೆ
ನನ್ನ ಸಮಯಕ್ಕಾಗಿ ಕಾಯುತ್ತಾ....
ವ್ಯಥೆಯ ನುಂಗಿ ಹೆಜ್ಜೆ ತಡವರಿಸಿದೆ
ಬಿಕ್ಕಿಬಿಕ್ಕಿ ಅಳುವೇ ನಾಳೆ ಇಲ್ಲವೆಂದು
ಜೀವನವೇ ನಿನ್ನ ಪ್ರೀತಿಸಲಾರೆನೆಂದು
ಗಹಗಹಿಸಿ ನಗುವ ಕಾಲನ ಕರಿ ನೆರಳು
ಆವರಿಸುವ ಮುನ್ನ ಅವಲೋಕನವಿದು
ಕಂತೆಬೊಂತೆಯಾಗಿಹ ರದ್ದಿ ಪುಸ್ತಕವಿದು
ಮುಂದೊದಗುವ ಅವಕಾಶಗಳಿಗೆ
ಪೀಠಿಕೆ,ಮುನ್ನೋಟವಿದು.