ನನ್ನ ಕೋಗಿಲೆ ಹಾಡುತ್ತಿಲ್ಲ
ಏಕೆ ನೀವು ಬಲ್ಲಿರಾ?
ಮುಂಜಾವಿನ ರಸ ಗಳಿಗೆಯಲಿ
ರಾಗರವಿಗೆ ಸುಪ್ರಭಾತ ಹಾಡ ಹೇಳಿ
ಕವಿಯದರ ಮಧುರತೆಯಲಿ ತೇಲಿ
ದಿನದ ಕಾಯಕಕ್ಕೆ ಅದುವೆ ಲಾಲಿ
ಮಧುರತೆಗೆ ಮನಸೋತು
ಕಾಲವು ಮುಂದೆಹೋತು
ನೆನಹು ಭಾವ ನಲ್ಮೆ ಹೂತು
ಭಾವ ಬೆಸುಗೆ ಮನದಲಿ ಮೂಡಿತು
ಇಂದು ಹಾಡ ಇಂಪು ಕೇಳಿಸದು
ಕವಿಯ ಮನಸು ಬೆದರಿಹುದು
ಯಾರ ಕೇಳಲಿ? ಎಲ್ಲಿ ಹುಡುಕಲಿ?
ಹೃದಯ ಭಾರ ಭಾವಬಿಂದು
ಮನುಸು ಅದನು ಕೇಳದು
tumba chennagide sir
ReplyDeleteನಿಮ್ಮ ಪ್ರೀತಿಯ ನುಡಿಗಳಿಗೆ ವಂದನೆಗಳು.
ReplyDelete