ರಕ್ಷಿಸುವವ ನಮ್ಮ ಮೇಲಿದ್ದಾನೆ,
ಅತಿನೀಲಿ ಕಿರಣಗಳ ರಕ್ಷಾ ಕವಚವದು,
ಭೂಮಿಗೆ ತಂಪಾದ ಬೆಳಕ ನೀಡುವುದು,
ಓಜೋನ್ ಅದರ ಹೆಸರು- ನಮ್ಮ ದೈವವದು.
ನಮಗೆ ಕಾಣದ ದೇವರದು,
ನಮ್ಮ ಆರೋಗ್ಯದ ರಕ್ಷಾ ಪದರವದು,
ನಮ್ಮ ಅಜ್ಞಾನದಿಂದ ಅದು ನಾಶವಾಗುತಿದೆ,
ನಮ್ಮ ರಕ್ಷಾ ಕವಚವ ನಾವೇ ಹಾನಿಮಾಡುತಿಹೆವು.
ಬುದ್ದಿವಂತ ಜನ ಅರಿವ ಮೂಡಿಸುತಿಹರು,
ರಾಸಾಯನಿಕಗಳೇ 'ಓಜೋನ್' ನಿನ ಶತೃ,
ಬದಲಾವಣೆ ಬಂದಿದೆ, ನಿಧಾನ ಗತಿಯಲ್ಲಿ,
ಆಗಸದೆಡೆ ನೋಡು, ರಕ್ಷಿಸುವ ಮಾರ್ಗ ತೆರೆ.
ಈ ದಿನ "ಓಝೋನ್ ದಿನ" ನೆನಪಿಡೋಣ,
ಓಜೋನ್ ಪದರದ ಮಹತ್ವ ತಿಳಿಸೋಣ,
ಹೆಚ್ಚು ಮರ-ಗಿಡಗಳ ಬೆಳೆಸೋಣ,
ತ್ಯಾಜ್ಯ,ರಾಸಾಯನಿಕಗಳ ಕಡಿಮೆ ಬಳಸೋಣ,
ಮುಂದಿನ ಪೀಳಿಗೆಗೆ ಭೂಮಿಯ ರಕ್ಷಿಸೋಣ.
16th Sep - Ozone Day
No comments:
Post a Comment