Sunday, September 27, 2026

ಗಣೇಶನ ಆಗಮನ

ಬಾ ಗಣೇಶ, ಪ್ರತಿ ವರುಷದಂತೆ

ಬಾದ್ರಪದ ಮಾಸ ಶುಕ್ಲ ಚೌತಿಯಂದು,

ನೀ ಬಂದು ನಮ್ಮ ಹರಸು,

ನೀ ಬಂದು ನಮ್ಮನ್ನೆಲ್ಲಾ ಒಗ್ಗೂಡಿಸು.


 ಅಮ್ಮನ ಕರೆದೊಯ್ಯಲಿ ಏಕಿಷ್ಟು ತವಕ,

ನೀ ಬರಲು ಸಂತೋಷ, ಸಡಗರ ನಮಗೆ,

ಮೂರು, ಐದು, ಏಳು ಇಪ್ಪತ್ತೊಂದು ದಿನ,

ನಮ್ಮ ಜೊತೆ  ನೀ ನೆಲೆಸಿರುವೆ ಬಂಧುವಾಗಿ.  

 

ಸಂಬಂಧಗಳ ಗಟ್ಟಿಗೊಳಿಸಲು ನೀ ಬಾ,

ನಮ್ಮ ಕಷ್ಟ ಕೋಟಲೆಗಳ ಕಳೆಯೆ ನೀ ಬಾ,

ವಿಘ್ನಗಳ ಪರಿಹರಿಸಿ ದಾರಿಯ ನೀ ತೋರು ಬಾ,

ಸಮಾಜದ ಸಾಮರಸ್ಯ ರಥವನೇರಿ ನೀ ಬಾ.

 

ಬರುವಾಗ ನೀ, ಜೊತೆ ಮಳೆಯ ಕರೆ ತಾ,

ಈ ಭುವಿಯ ತಂಪಾಗಿಸು, ಸಂತೈಸು ಬಾ,

ಹೊಸ ಯೋಚನೆಗೆ ಸ್ಫೂರ್ತಿಯಾಗಿ ಬಾ,

ಸಾಧನೆಗೆ ಶಿಲ್ಪಿಯಾಗಿ ಮನದೊಳು ನಿಲ್ಲು ಬಾ.


No comments:

Post a Comment

ಮಧುರವೋ? ನೋವೋ?

ಇದೆ ಜಾಗವಲ್ಲವೇ ? ನಾನು ಇಲ್ಲಿಯೇ ಬಿದ್ದದ್ದು , ಜ್ಞಾನ ತಪ್ಪಿದ್ದು , ಮತ್ತೆ ಜೀವನದಲ್ಲಿ ಏಳಲಾರದೆ ಪರಿತಪಿಸಿದ್ದು , ಇದೆ ಉದ್ಯಾನವಲ್ಲವೇ ? ನಾ ಇಷ್...