ಓ! ಈ ದಾರಿ ಮನದಲ್ಲಿ ನೆಲೆ ನಿಂತಿದೆ,
ಮುನ್ನಡೆಯುತಿರೆ ಸಂತಸ ಉಕ್ಕುವುದು,ಅವ್ಯಕ್ತ
ಭಾವ ಹೊಮ್ಮುವುದು ಹೃದಯದಿ,
ಎಂದೋ ಕಂಡ ಸಂತಸ, ಪಟ್ಟ ರೀತಿ ಅನನ್ಯ,
ಏನೋ
ಸೆಳೆತ, ಹಗುರ ಹೃದಯದಲ್ಲಿ ಪುಳಕ,
ಪಯಣವೋ!,
ಹಾರಾಟವೋ! ಎಲ್ಲವೂ ಸುಲಲಿತ,
ನಿನ್ನೆ
ನಡೆದುಹೋದೆನೆಂಬ ಪರಿಚಯದ ಬಿಂಬ,
ಸಾಗುತ್ತಾ,
ಸಾಗುತ್ತಾ ದಣಿವರಿಯದ ಪಯಣ,
ಮನದಲ್ಲಿ
ಹಾಸುಹೊಕ್ಕಾಗಿದೆ ಸಂತಸದ ಪಯಣ,
ಎಲ್ಲಾ
ಪಯಣವೂ ಹೀಗೆ ಇರಲಿ ಮಧುರ,
ಪಯಣದ
ಆಯಾಸವಿಲ್ಲ, ಬೇಸರವಿಲ್ಲ,
ಸಂತಸ
ಬಿಟ್ಟು ಬೇರೇನೂ ಅಲ್ಲಿ ಇರಲಿಲ್ಲ,
ಈ
ದಾರಿ, ಈ ಪಯಣ ಅತಿ
ಮಧುರ, ಅನಂತ.

No comments:
Post a Comment