Sunday, July 12, 2026

🎶 ಎಸ್. ಜಾನಕಿ - ಭಾವಗಳ ಕೋಗಿಲೆ

ಬೆಳಗಿನ ಜಾವ ಮೌನದಿ ನಿಮ್ಮಯ ಹಾಡು ಕಣ್ಣ ತೆರೆವುದು,

ಕಾಲಾತೀತ  ಪರಿಮಳ ಹೊತ್ತ ಸೌಮ್ಯ ತಂಗಾಳಿಯಂತೆ.

ಮಲ್ಲಿಗೆಯ ಸುಗಂಧ, ಮನೋಹರ, ಶುದ್ಧ,ಕೋಮಲ,

ಆತ್ಮಗಾನ ಲಹರಿ ಹರಿಗರ್ಪಿತವದು  ಹೃದಯ ಶರಣಾಗುವುದು.


ನಿಮ್ಮ ಪ್ರೀತಿಯ ಹಾಡು, ನೋವಿನ ಹಾಡು,

ಮಧುರ ಗಾನ ನೋವ ತಣಿಸುವ ಅಮೃತಗಾನ.

ಪ್ರತಿ ಆಲಾಪನೆ  ಹೃದಯದ ಪ್ರಾರ್ಥನೆ, 

ಮನಕೆ ನೆಮ್ಮದಿ ಗಾನ ಸರಸತಿಯ ಪಿಸುಮಾತು. 


ನಿಮ್ಮ ಧ್ವನಿ ಕೋಗಿಲೆಯ ಗಾನದಂತೆ,

ಕೃಷ್ಣನ ಮಧುರ ಮುರಳಿ ನಾದದಂತೆ. 

ನಿಮ್ಮ ಹಾಡ ಕೇಳಿ ಬೆಳೆದೆವು, ಕನಸ ಕಂಡೆವು,

ನಿಮ್ಮಂತೆ ಹಾಡ ಬಲ್ಲವರು ಯಾರಿಹರು?. 


ಓ ಜಾನಕಿ, ಕೋಗಿಲೆ ಕಂಠದ ಗಾಯಕಿ, 

ನಿಮ್ಮ ಕಂಠದ ಸಂಗೀತ ಕಿವಿಯಲಿ ನಲಿಯಲಿ. 

ಮನದಲಿ ನಿಮ್ಮ ಮಧುರ ಗಾನ ಅಮರವಾಗಲಿ, 

ನಾವು ಧನ್ಯ, ನೀವು ಅಮರ, ನಿಮ್ಮ ಹಾಡು ಅಮರ. 

No comments:

Post a Comment

🎶 ಎಸ್. ಜಾನಕಿ - ಭಾವಗಳ ಕೋಗಿಲೆ

ಬೆಳಗಿನ ಜಾವ ಮೌನದಿ ನಿಮ್ಮಯ ಹಾಡು ಕಣ್ಣ ತೆರೆವುದು, ಕಾಲಾತೀತ  ಪರಿಮಳ ಹೊತ್ತ ಸೌಮ್ಯ ತಂಗಾಳಿಯಂತೆ. ಮಲ್ಲಿಗೆಯ ಸುಗಂಧ, ಮನೋಹರ, ಶುದ್ಧ,ಕೋಮಲ, ಆತ್ಮಗಾನ ಲಹರಿ ಹರಿಗರ್ಪಿತ...