Friday, February 20, 2026

ಮೌನ ರಾಗ

ಕಂಡೆನೆಂದು ನಡೆವಾಗ ಕಾನನದಲ್ಲಿ,

ನಿನ್ನ ರೂಪ ಹೃದಯದಲ್ಲಿ,


ಛಾಪು ಮೂಡಿದೆ ಆ ರೂಪ ಮನದಲ್ಲಿ,

ಆ ರೂಪ ತುಂಬಾ ಅಪರೂಪ ಇಲ್ಲಿ.

 

ಹೃದಯದ ಮೂಲೆಯಲ್ಲಿ ಧ್ವನಿಸುತ್ತಿದೆ ಮೌನ ರಾಗ,

ಬೇಡ ಬೇಡವೆಂದರೂ ನಿದಿರೆಯ ಓಡಿಸುತ್ತಿದೆ ವಿರಾಗ,

ಹಕ್ಕಿಗಳಿಂಚರ ಚಿಲಿಪಿಲಿ ಹರಡಿದೆ ಪ್ರಕೃತಿ ಗಾನ,

ಏರುತ್ತಿದೆ ಮೂಡಣದ ಸೂರ್ಯೋದಯದ ತೆರೆ.

 

ತಬ್ಬಿ ಹಿಡಿದ ಚಳಿ ಬಿಡಲೊಲ್ಲದೆ ಬಾಹುಗಳಲ್ಲಿ ಅಪ್ಪಿದೆ,

ಆ ದೇವನ ಚೈತನ್ಯದ ಕಿರಣವೊಂದು ಹೃದಯವ ತಾಕಿದೆ,

ಅಣು ಅಣುವಿನಲಿ ಹೊಕ್ಕು ವಿಶ್ವರೂಪವ ತೋರಿದೆ,

 ಶಕ್ತಿಯ ತುಂಬಿ ಹೃದಯದಲಿ ಅನಂತ ಸಾಗರವಾಗಿದೆ. 

No comments:

Post a Comment

ಮಧುರವೋ? ನೋವೋ?

ಇದೆ ಜಾಗವಲ್ಲವೇ ? ನಾನು ಇಲ್ಲಿಯೇ ಬಿದ್ದದ್ದು , ಜ್ಞಾನ ತಪ್ಪಿದ್ದು , ಮತ್ತೆ ಜೀವನದಲ್ಲಿ ಏಳಲಾರದೆ ಪರಿತಪಿಸಿದ್ದು , ಇದೆ ಉದ್ಯಾನವಲ್ಲವೇ ? ನಾ ಇಷ್...