-ಸಾಧಿಸಿದ್ದೇನು?-

ಅಂದು ಭಾನುವಾರ!
ಸುಂದರ ಬೆಳಗು,
ಸೂರ್ಯನ ಚಿನ್ನದ ಕಿರಣಗಳು
ಜೀವಕೋಟಿಗೆ ಚೈತನ್ಯದ ಮೆರುಗು ಕೊಡುತ್ತಿದೆ ಸದ್ದಿಲ್ಲದೇ!
ಮನದಲ್ಲಿ ನೂರು ಯೋಚನೆಗಳು
ಸೂಚನೆ ನೀಡದೆ ದಾಳಿಮಾಡಿದೆ
ಮುದದಿ ಮನವು ಕಾಫಿಯ ಬಯಸಲು
ಕಾಲಿನ ಪಯಣ ಹೋಟಲಿನೆಡೆ ನಡೆಯಲು
ಹೆಣ್ಣೋರ್ವಳು ತನ್ನ ಕಂದನನ್ನು ಸಂತೈಸುತಿರಲು
ಕಂದನ ಕೈಗಳಿಗೆ ಹಾಕಿದ ಬ್ಯಾಂಡೆಜಿನೆಡೆಗೆ ನನ್ನ ಗಮನ ಮನವ ಘಾಸಿಗೊಳಿಸಿತು
'ಮಗುವಿನ ಬಲಗೈ ಹಸ್ತವೇ ಇಲ್ಲ' ಮುಂದೆ ಗತಿ ಏನು?
ಮನದಲ್ಲೆದ್ದ ಉತ್ತರ ಕಾಣದ ಪ್ರಶ್ನೆ!
ತಾಯಿಯ ಮುಖದಲ್ಲಿ ವ್ಯಥೆಯ ಛಾಯೆಯಿಲ್ಲ
ಜೀವನದ ದಡ ಮುಟ್ಟಿಸುವೆ ದಿಟ್ಟತನದ ಛಾಯೆಯಿತ್ತು
"ನಮಗೆ ಕೈಯಿದ್ದು ಸಾಧಿಸಿದ್ದೇನು?" ಎಂಬ ಪ್ರಶ್ನೆ ನನ್ನಲ್ಲಿ ಸಮಾಧಾನ ತಂದಿತ್ತು

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...