ಅಂತು ಇಂತು ಇನ್ಕ್ರಿಮೆಂಟ್ ಬಂತು
ಏಪ್ರಿಲ್-ಮೇ ಬಂತು ಕುತೂಹಲ ತಂತು\\
ಗುಸು ಗುಸು ಪಿಸು ಪಿಸು ಮಾತು
ಎಲ್ಲೆಲ್ಲಿಯೋ ತೇಲಿಬರುತಿದೆ ಗಾಳಿಮಾತು\
ಅವರಿಗಿಷ್ಟಂತೆ, ಇವರಿಗಿಷ್ಟಂತೆ
ಮುಂದಿನ ತಿಂಗಳು ಆಗಬಹುದಂತೆ\\
ಮಾತುಕತೆ ನಡೆದಿದೆಯಂತೆ
ಇಬ್ಬರಲ್ಲಿಯೊ ಸಹಮತವಿಲ್ಲವಂತೆ\
ನಾಳೆ ಮತ್ತೊಮ್ಮೆ ಮಾತುಕತೆಯಂತೆ
ಒಡಕು ಮಾತ್ರ ತುಂಬಾ ಇದೆಯಂತೆ\\
ಅವರ ಮಾತಿಗೆ ಇವರು ಒಪ್ಪುತ್ತಿಲ್ಲವಂತೆ
ಇವರ ಮಾತಿಗೆ ಅವರು ಒಪ್ಪುತ್ತಿಲ್ಲವಂತೆ\
ತಿಂಗಳು ತಿಂಗಳು ಮಾತ್ರ ಕಳೆಯುತ್ತಿದೆ
ಮಾತುಕತೆ ಮಾತ್ರ ನಿಂತಲ್ಲೇ ನಿಂತಿದೆ\\
ಎಲ್ಲರಲ್ಲೂ ಆಗಲಿಲ್ಲವೆಂಬ ವ್ಯಥೆ
ಚುಟುಕು ಮಾತು ಹಾಸ್ಯಕ್ಕೆ ಇಲ್ಲ ಇಲ್ಲಿ ಕೊರತೆ\
ಕಾದೆವು ನಾವು ಶಬರಿಯಂತೆ
ಆದರೂ ಅದರಲ್ಲೇ ಇದೆ ಸಂತೋಷ-ಕಾತರತೆ\\
No comments:
Post a Comment