ದೇವಸ್ಥಾನ

ನೀನು ಅಲ್ಲಿ ಕುಳಿತಿರುವೆ ಧ್ಯಾನಾಸಕ್ತನಾಗಿ
ಕಣ್ಣು ಮುಚ್ಚಿರುವೆ ಏನೂ ಅರಿಯದವನಂತೆ
ನೂರು ಜನರು ದಿನವೂ ಬಂದು ನಿಲ್ಲುವರು ನಿನ್ನ ಮುಂದೆ
ಪ್ರಾರ್ಥನೆ,ಬಯಕೆ,ಬೇಡಿಕೆ,ಹರಕೆಗಳೊಂದಿಗೆ
ಏನೂ ಗೊತ್ತಿಲ್ಲದವನಂತೆ ಕುಳಿತಿರುವೆ ನೀನು\
ನಾನೂ ನಿನ್ನ ಬಳಿ ಬರಲಾರೆ
ನಿನ್ನ ಬಳಿ ಬರುವ ಇಚ್ಚೆ ನನ್ನಲಿಲ್ಲ
ಎಲ್ಲೆಡೆಯಲ್ಲೂ ನೀನಿರುವೆಯೆಂದು ನಾ ಬಲ್ಲೆ
ನಿನಗಾಗಿ ನನ್ನ ಹೃದಯದಲ್ಲಿ ಜಾಗವಿದೆ
ಆ ಜಾಗ ನೀನು ಆಗಲೇ ತುಂಬಿರುವೆ
ಪ್ರತಿ ಸಲವೂ ಈ ಎಲ್ಲಾ ಜನ್ರು ನಿನ್ನ ಮುಂದೆ
ಕೈಕಟ್ಟಿ ನಿಂತಿರುವುದನ್ನು ನೋಡಿದಾಗಲೆಲ್ಲಾ
ಅಲ್ಲಿ ನಿಲ್ಲಬಾರದೆಂಬ ದೃಡತೆ ಹೆಚ್ಚಾಗುತಿದೆ
"ಕೈ ಕಟ್ಟಿ ಕುಳಿತುಕೊಳ್ಳಬೇಡ
ಇಲ್ಲಿ ಬರುವ ಅಗತ್ಯವೂ ಇಲ್ಲ
ನಿನ್ನ ಮುಂದೆ ದಾರಿ ತೆರೆದಿದೆ
ಸತ್ಯ-ಮಿಥ್ಯಗಳು ತಿಳಿದಿದೆ
ಅರಿವಿನ ಪಥ ಸ್ವಾಗತಿಸುವುದು
ಮುನ್ನಡೆ ಗುರಿ ಮುಟ್ಟುವವರೆಗೂ ನಿಲ್ಲದಿರು
ಛಲ ನಿನ್ನದಿರಲಿ-ಬಲ ನನ್ನದು"
ನಿನ್ನ ಮುಖದ ಮಂದಹಾಸದ ಭಾವ ಯಾರಿಗೂ ಅರ್ಥವಾಗುತ್ತಿಲ್ಲ\\

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...