Sunday, July 20, 2025

ಹರಿವ ನದಿಯ ಕಣ್ಣೀರು

 ಸಂಜೆಯಾಗಸದಲಿ ಹೊಸತೇನೂ ಇಲ್ಲ,

ಆಗಸವೂ ಬರಿದಾಗಿದೆ ಮೋಡಗಳೇ ಇಲ್ಲ!

ಬಿಸಿಲ ಬೇಗೆಗೆ ಬಾಯಾರಿವೆ ತರುಲತೆಗಳು,

ಬಿಸಿಲ ಧಗೆಯೊಂದೇ ಗ್ಯಾರಂಟೀ ಖಚಿತವಿಲ್ಲಿ।।

 

ಮಳೆ ಇಲ್ಲ, ಅಂತರ್ಜಲ ಪಾತಾಳಕ್ಕಿಳಿದಿದೆಯಲ್ಲಾ!,

ಕೆರೆ, ಕೊಳ್ಳಗಳು ಖಾಲಿ,ಖಾಲಿ, ನಮ್ಮಲ್ಲಿ ನೀರಿಲ್ಲ।

ಟ್ಯಾನ್ಕರ್ ಯಜಮಾನರದೇ ಕಾರುಬಾರು ಇಲ್ಲಿ,

ಸರ್ಕಾರಕ್ಕೂ ಸಿಗುತ್ತಿಲ್ಲ ಒಂದು ಹನಿ ನೀರು||

 

ಕಾವೇರಿ ಕಣ್ಣೀರು ಹಾಕುತ್ತಾ ತಮಿಳುನಾಡಿಗೆ ಹರಿದಳು,

ಕೊಡಗಿನ ಕಾವೇರಿ ಹೆಸರಿಗೆ ನಮ್ಮ ಹೆಮ್ಮೆ|

ತವರು ಮನೆ ಬಿಟ್ಟು ತೆರಳುವ ಮಗಳು ಅವಳು,

ಕೊಟ್ಟ ಹೆಣ್ಣು ಕುಲದಿಂದ ಹೊರಗೆ, ಕಾವೇರಿ ನಮ್ಮವಳಲ್ಲ||

 

ಮಂಡ್ಯದ ಜನರ ಜೀವನಾಡಿ ಕಾವೇರಿ ಆದರೇನು?

ಕಾವೇರಿ ಹರಿದು ಹೋದ ಮೇಲೆ ಕಣ್ಣೀರ ಕಥೆಯೇ!

ಮಂಡ್ಯದ ಹೈಕಳು ನಡೆಸುವರು ಜೋರು ಹೋರಾಟಾ,

ಮಾಡಿದರು ಸರ್ಕಾರದ ತಿಥಿ, ಶ್ರಾಧ್ದದ ಊಟ।।

 

ಹರಿದು ಹೋಗುವವಳ ತಡೆವವರಾರು?

ಕಾವೇರಿ  ನಮ್ಮವಳಲ್ಲ,ನಮ್ಮವಳಲ್ಲ...  

No comments:

Post a Comment

ಅಜ್ಞಾತ ಹಾದಿಯ ಹೆಜ್ಜೆಗಳು

  ಯಾರೂ ನಡೆಯದ ಹಾದಿಯಲ್ಲಿ , ನಡೆವುದೇ ಒಂದು ರೋಚಕ | ಜೊತೆಗಾರೂ ಹೆಜ್ಜೆ ಹಾಕುವರಿಲ್ಲ , ಪ್ರತಿ ಹೆಜ್ಜೆಯಲ್ಲೂ ಕೌತುಕ ||   ಬುದ್ಧಿಯಿಲ್ಲ ಹುಚ್ಚನ...