ನನ್ನ ಬೆಳಕು

ಇವರು ನಮ್ಮವರು

ಇವರು ನಮ್ಮವರು

ನನ್ನ ಮನಸ್ಸಿಗೆ ಶಕ್ತಿ ಕೊಟ್ಟವರು\\

ನಾವಿಲ್ಲಿ ಏನು?

ನಾವೇಕೆ ಇಲ್ಲಿ?

ಅರಿವು ಮೊಡಿಸಿದ ಗುರು ಅವರು\\

ನನ್ನ ಮನದ ಕೊಳಕು

ನನ್ನ ನಡತೆಯ ಬಳುಕು

ತೊಳೆದು ಪುಟವಿಟ್ಟ ಬೆಳಕು ಅವರು\\

ನಿಂತ ನಿರಾಗಿದ್ದ ಚೈತನ್ಯ

ಹರಿಯುವನ್ತಾಗಿಸಿದ ಧೈತ್ಯ ಶಕ್ತಿ

ನನ್ನೊಳಗೆ ಶಕ್ತಿ ತುಂಬಿದ ಶಕ್ತಿಯವರು\\

ನಾಳೆ ಹೇಗೋ ಏನೋ?

ಇಂದು ಸಂತೋಷದಿ

ಮುಂದೆ ಸಾಗುವಂತೆ ದಾರಿ ತೋರಿದ ದೀಪ ಅವರು\\

ಜೀವನ ಪಾಠ

ಹೆದರದಿರು
ಬೆದರದಿರು
ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು
ಇದುವೆ ಛಲದ ತಂತ್ರ
ಇದುವೆ ಗೆಲುವಿನ ಮಂತ್ರ\\

ಕೊರಗದಿರು
ಮರುಗದಿರು
ಜೀವನವೇ ಒಂದು ನೋವಿನ ಸಂತೆ
ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ
ನೋವ ಪಡೆದು ನಗುವ ಕೊಡುವವರು ಇಲ್ಲಿ ಬಹಳ ವಿರಳ ವಿರಳ\\

ನಮ್ಮ ಶಕ್ತಿ

ಯಾವುದದು? ಯಾವುದದು ?
ಯಾವ ಶಕ್ತಿ ಯಾವುದದು?\
ನಮ್ಮ ಸೆಳೆಯುವ,ಪೋಷಿಸುವ ಶಕ್ತಿ ಯಾವುದದು?\\

ಯಾವ ತುಡಿತವದು? ಯಾವುದು?
ಬರೆಯುವಂತೆ ಪ್ರೇರೇಪಿಸುವ ಶಕ್ತಿ ಯಾವುದದು?\
ಅಮ್ಮಾ ನೀನಿತ್ತ ವಾತ್ಸಲ್ಯದ ಶಕ್ತಿಯೇ?
ನೀ ಪ್ರೀತಿಯಿಂದ ಕೊಟ್ಟ ಮುತ್ತಿನ ಶಕ್ತಿಯೇ?\\

ಜೀವನಾಡಿಯ ಅಣು ಅಣುವಿನಲಿ
ಹರಿದಾಡಿ ಬಡಿದೆಬ್ಬಿಸುವ ಚೈತನ್ಯವದಾವುದು?\
ಅಮ್ಮಾ ನೀ ಅಕ್ಕರೆಯಿಂದಲಿ ಕಳಿಸಿದ
ಕನ್ನಡದ ತೊದಲು ನುಡಿಯೇ?\\

ಸರ್ವವ್ಯಾಪಿ ನಿರಾಕಾರ ಶಕ್ತಿಯೇ
ಅರುಣ ಕರಣ ಮಂಗಲಾಮ್ಬರ ಸ್ಥಿತೆಯೇ?\
ಅಮ್ಮಾ ಅಮ್ಮಾ ಎಂಬೆರಡಕ್ಷರದಲಿ
ಮಂತ್ರರೂಪದಲಿ ನೆಲೆಸಿರುವ ಶಕ್ತಿಯೇ ನೀನು\\

ಇಂದಿನ ಆದರ್ಶ

ದಾರಿ ಬಿಡಿ,ದಾರಿ ಬಿಡಿ
ದೇಶವನ್ನಾಳುವವರು ಬಂದರು\
ಜಾಗ ಕೊಡಿ,ಜಾಗ ಕೊಡಿ
ಕುಳಿತು ಹಣವ ಸ್ವಾಹ ಮಾಡಲು\\

ನ್ಯಾಯ.ನೀತಿ,ಧರ್ಮಗಳೆಲ್ಲಾ
ಯಾವ ಮೊಲೆ ಸೇರಿದವೋ?\
ಮೋಸ,ಕುತಂತ್ರ,ಅನ್ಯಾಯಗಳೆಲ್ಲಾ
ಮೇಲ್ಪಂಕ್ತಿಗೆ ಬಂದು ಕುಳಿತಾವೋ!\\

ಮಾತಿಗೆ ಕಟ್ಟು ಬೀಳುವ ಕಾಲವು ಹೋಯಿತು
ನೀತಿ,ಧರ್ಮಗಳ ಪಾಲಿಸುವವರು ಯಾರು?\
ವಚನಭ್ರಷ್ಟತೆಯೇ ಇಂದಿನ ಆದರ್ಶ
ಅನೀತಿ,ಕುಟಿಲತೆಯೇ ಇಂದಿನವರ ಉಸಿರು\\

ರಾಮ-ಕೃಷ್ಣ, ಗಾಂಧಿ ಖಳನಾಯಕರಾದರೋ!
ಕುಡಿವ ಗಾಳಿ,ನೀರು,ಆಹಾರ ವಿಷವಾದವೋ!\
ದುರ್ಯೋದನ,ಕಂಸ,ರಾವಣರೇ ಇಂದಿನ ನಾಯಕರೋ!
ದ್ವೇಷ,ಲಂಚ,ಮೋಸ,ಸ್ವಾರ್ಥಗಳೇ ಅಸ್ತ್ರಗಳಾದವೋ!\\

ಅಂತರ?

ಏಕೆ ಹೇಗೆ ನಮ್ಮ ನಡುವೆ ಬೆಳೆದಿದೆ ಅಂತರ?
ನಾನು ನಮ್ಮದೆಂಬ ಸ್ವಾರ್ಥವೇ ಬೆಳೆದಿದೆ ಎತ್ತರ\\

ನಾನು ನಮ್ಮದು ಎಷ್ಟುಕಾಲ?
ಭ್ರಮೆಯ ನಡುವೆ ನಮ್ಮ ಧಾಪುಗಾಲು\
ಎತ್ತ ಹೋದರೂ ಬೆಂಬಿಡದ ಬಾಲ
ಬಿಟ್ಟೋಡುವುವೆವು ಬಂದಾಗ ಕೊನೆಗಾಲ\\

ಏಕೆ? ಹೇಗೆ? ಏನು? ಯಾರೂ ಅರಿಯರು
ಮಾತು,ಮೌನ,ಸ್ವಾರ್ಥ ದ್ವೇಷ ಬಿತ್ತಿ ಬೆಳೆಯುತಿಹರು\\

ಒಂದೇ ದಾರಿ ಹತ್ತು ಹೆಜ್ಜೆಗಳು
ಒಂದೇ ದೇವರು ಹಲವು ಧರ್ಮಗಳು\
ಮನಸು-ಮನಸು ಒಡೆದಿದೆ
ಶಾಂತಿ ಮಂತ್ರ ಜಪಿಸುವ ಶಕ್ತಿ ಬೇಕಿದೆ\\

ಇನ್ಕ್ರಿಮೆಂಟ್

ಅಂತು ಇಂತು ಇನ್ಕ್ರಿಮೆಂಟ್ ಬಂತು
ಏಪ್ರಿಲ್-ಮೇ ಬಂತು ಕುತೂಹಲ ತಂತು\\

ಗುಸು ಗುಸು ಪಿಸು ಪಿಸು ಮಾತು
ಎಲ್ಲೆಲ್ಲಿಯೋ ತೇಲಿಬರುತಿದೆ ಗಾಳಿಮಾತು\
ಅವರಿಗಿಷ್ಟಂತೆ, ಇವರಿಗಿಷ್ಟಂತೆ
ಮುಂದಿನ ತಿಂಗಳು ಆಗಬಹುದಂತೆ\\

ಮಾತುಕತೆ ನಡೆದಿದೆಯಂತೆ
ಇಬ್ಬರಲ್ಲಿಯೊ ಸಹಮತವಿಲ್ಲವಂತೆ\
ನಾಳೆ ಮತ್ತೊಮ್ಮೆ ಮಾತುಕತೆಯಂತೆ
ಒಡಕು ಮಾತ್ರ ತುಂಬಾ ಇದೆಯಂತೆ\\

ಅವರ ಮಾತಿಗೆ ಇವರು ಒಪ್ಪುತ್ತಿಲ್ಲವಂತೆ
ಇವರ ಮಾತಿಗೆ ಅವರು ಒಪ್ಪುತ್ತಿಲ್ಲವಂತೆ\
ತಿಂಗಳು ತಿಂಗಳು ಮಾತ್ರ ಕಳೆಯುತ್ತಿದೆ
ಮಾತುಕತೆ ಮಾತ್ರ ನಿಂತಲ್ಲೇ ನಿಂತಿದೆ\\

ಎಲ್ಲರಲ್ಲೂ ಆಗಲಿಲ್ಲವೆಂಬ ವ್ಯಥೆ
ಚುಟುಕು ಮಾತು ಹಾಸ್ಯಕ್ಕೆ ಇಲ್ಲ ಇಲ್ಲಿ ಕೊರತೆ\
ಕಾದೆವು ನಾವು ಶಬರಿಯಂತೆ
ಆದರೂ ಅದರಲ್ಲೇ ಇದೆ ಸಂತೋಷ-ಕಾತರತೆ\\

ದೇವಸ್ಥಾನ

ನೀನು ಅಲ್ಲಿ ಕುಳಿತಿರುವೆ ಧ್ಯಾನಾಸಕ್ತನಾಗಿ
ಕಣ್ಣು ಮುಚ್ಚಿರುವೆ ಏನೂ ಅರಿಯದವನಂತೆ
ನೂರು ಜನರು ದಿನವೂ ಬಂದು ನಿಲ್ಲುವರು ನಿನ್ನ ಮುಂದೆ
ಪ್ರಾರ್ಥನೆ,ಬಯಕೆ,ಬೇಡಿಕೆ,ಹರಕೆಗಳೊಂದಿಗೆ
ಏನೂ ಗೊತ್ತಿಲ್ಲದವನಂತೆ ಕುಳಿತಿರುವೆ ನೀನು\
ನಾನೂ ನಿನ್ನ ಬಳಿ ಬರಲಾರೆ
ನಿನ್ನ ಬಳಿ ಬರುವ ಇಚ್ಚೆ ನನ್ನಲಿಲ್ಲ
ಎಲ್ಲೆಡೆಯಲ್ಲೂ ನೀನಿರುವೆಯೆಂದು ನಾ ಬಲ್ಲೆ
ನಿನಗಾಗಿ ನನ್ನ ಹೃದಯದಲ್ಲಿ ಜಾಗವಿದೆ
ಆ ಜಾಗ ನೀನು ಆಗಲೇ ತುಂಬಿರುವೆ
ಪ್ರತಿ ಸಲವೂ ಈ ಎಲ್ಲಾ ಜನ್ರು ನಿನ್ನ ಮುಂದೆ
ಕೈಕಟ್ಟಿ ನಿಂತಿರುವುದನ್ನು ನೋಡಿದಾಗಲೆಲ್ಲಾ
ಅಲ್ಲಿ ನಿಲ್ಲಬಾರದೆಂಬ ದೃಡತೆ ಹೆಚ್ಚಾಗುತಿದೆ
"ಕೈ ಕಟ್ಟಿ ಕುಳಿತುಕೊಳ್ಳಬೇಡ
ಇಲ್ಲಿ ಬರುವ ಅಗತ್ಯವೂ ಇಲ್ಲ
ನಿನ್ನ ಮುಂದೆ ದಾರಿ ತೆರೆದಿದೆ
ಸತ್ಯ-ಮಿಥ್ಯಗಳು ತಿಳಿದಿದೆ
ಅರಿವಿನ ಪಥ ಸ್ವಾಗತಿಸುವುದು
ಮುನ್ನಡೆ ಗುರಿ ಮುಟ್ಟುವವರೆಗೂ ನಿಲ್ಲದಿರು
ಛಲ ನಿನ್ನದಿರಲಿ-ಬಲ ನನ್ನದು"
ನಿನ್ನ ಮುಖದ ಮಂದಹಾಸದ ಭಾವ ಯಾರಿಗೂ ಅರ್ಥವಾಗುತ್ತಿಲ್ಲ\\

ಮುಸ್ಸಂಜೆ ಮಾತು

ಮುಸ್ಸಂಜೆ ಮೊಡುವ ಮುನ್ನ
ಆಡದ ಮಾತಿನಲ್ಲಿ ಹುರುಪಿದೆ\
ದೀಪ ಮೊಡುವ ಮುನ್ನ
ಮನದಲಿ ಬಯಕೆಯ ಚಿಗುರೊಡೆದಿದೆ\\

ಹಾರೋ ಹಕ್ಕಿಯ ಚಿಲಿಪಿಲಿ ಗಾನ
ಮನದಲಿ ರಾಗರತಿಯ ರಿಂಗಣ\
ತೇಲಿ ಬರುವ ತಂಗಾಳಿಯಲ್ಲಿ
ಮೈಮನಗಳ ಹಂಬಲದ ಭಾವನ\\

ನಕ್ಕು ಬರಮಾಡಿಕೊಂಡಿದೆ ಕಣ್ಣರಳಿಸಿ ಹಣತೆ
ಕಣ್ಣ ರೆಪ್ಪೆಗಳಲ್ಲಿ ಚಿಗುರೊಡೆದಿದೆ ಕಾತರತೆ\
ಮಾತು-ಮೌನ ಒಂದನ್ನೊಂದು ಬಿಡದೆ ಹೆಣದಿದೆ
ಗುಟ್ಟು ಬಿಡದೆ, ಬಿಟ್ಟು ಬಿಡದೆ ಒಂದಕ್ಕೊಂದು ಒಲಿದಿದೆ\\

ಚಂದ್ರ ನಾಚಿ ನೀರಾಗಿ ಹಂಬಲದಿ ಬಳಲಿದೆ
ಬೀಸೋ ತಂಗಾಳಿಯ ಹೊತ್ತು ತಿರುಗೋ ಮುಗಿಲು ಕಪ್ಪಿಟ್ಟಿದೆ\
ಪಿಳಿಪಿಳಿ ಕಣ್ಣುಬಿಟ್ಟು ನೋಡೋ ತಾರೆಗಳು ನಾಚಿಕೆಯಿಲ್ಲದೆ ನಲಿದಿದೆ
ಪ್ರೀತಿಸೋ ಹೃದಯಗಳೆರಡೂ ಬಾಹು ಬಂಧನದಲ್ಲಿ ಹಿತವಾಗಿ ನರಳಿದೆ\\

ಮುಸ್ಸಂಜೆಯಾಯಿತು
ಮಾತು ಮುತ್ತಾಯಿತು\
ದೀಪ ಮೊಡಿತು
ಬಯಕೆ ಸಾಕಾರಗೊಂಡಿತು\\

-ಯಾರು ?-

ಒಂದು ಪ್ರಾಣದಲ್ಲಿ
ಮತ್ತೊಂದು ಪ್ರಾಣವನಿಟ್ಟು ಪೋಷಿಸಿದವರು ಯಾರು?

ಕಣ್ಣಲ್ಲಿ ಬೆಳಕನಿಟ್ಟು
ಬೆಳಕಲ್ಲಿ ಎಲ್ಲವನಿಟ್ಟು ಕುರುಡಾಗಿಸಿದವರು ಯಾರು?

ಹೊರಗುಂಟು ಗಾಳಿ
ಉಸಿರಾಡುವ ವ್ಯವಸ್ಥೆ ನಮ್ಮಲ್ಲಿ ಸಾದರಪಡಿಸಿದವರು ಯಾರು?

ಎಲ್ಲೆಡೆಯಲ್ಲೂ ವ್ಯಾಪ್ತನಾದ
ಎಲ್ಲ ಜೀವಿಗಳಲ್ಲೂ ನೆಲೆಗೊಂಡು ಕಾಣದಂತಾದವರು ಯಾರು?

ಎಲ್ಲೆಲ್ಲೂ ದನಿಯಾಗಿ
ಸಂಗೀತದಲ್ಲಿ ಲೀನವಾಗಿ ಕಂಡು ಕಾಣದಂತಿರುವವರು ಯಾರು?

ನಾವು ನಾವಾಗಿರದೆ
ಯಾರದೋ ಸೆಳೆತಕ್ಕೆ ಒಳಗಾಗಿ ಎಲ್ಲೂ ನಮ್ಮನ್ನು ಸೆಳೆದುಕೂಳ್ಳುವವರು ಯಾರು?

-ಸಾಧಿಸಿದ್ದೇನು?-

ಅಂದು ಭಾನುವಾರ!
ಸುಂದರ ಬೆಳಗು,
ಸೂರ್ಯನ ಚಿನ್ನದ ಕಿರಣಗಳು
ಜೀವಕೋಟಿಗೆ ಚೈತನ್ಯದ ಮೆರುಗು ಕೊಡುತ್ತಿದೆ ಸದ್ದಿಲ್ಲದೇ!
ಮನದಲ್ಲಿ ನೂರು ಯೋಚನೆಗಳು
ಸೂಚನೆ ನೀಡದೆ ದಾಳಿಮಾಡಿದೆ
ಮುದದಿ ಮನವು ಕಾಫಿಯ ಬಯಸಲು
ಕಾಲಿನ ಪಯಣ ಹೋಟಲಿನೆಡೆ ನಡೆಯಲು
ಹೆಣ್ಣೋರ್ವಳು ತನ್ನ ಕಂದನನ್ನು ಸಂತೈಸುತಿರಲು
ಕಂದನ ಕೈಗಳಿಗೆ ಹಾಕಿದ ಬ್ಯಾಂಡೆಜಿನೆಡೆಗೆ ನನ್ನ ಗಮನ ಮನವ ಘಾಸಿಗೊಳಿಸಿತು
'ಮಗುವಿನ ಬಲಗೈ ಹಸ್ತವೇ ಇಲ್ಲ' ಮುಂದೆ ಗತಿ ಏನು?
ಮನದಲ್ಲೆದ್ದ ಉತ್ತರ ಕಾಣದ ಪ್ರಶ್ನೆ!
ತಾಯಿಯ ಮುಖದಲ್ಲಿ ವ್ಯಥೆಯ ಛಾಯೆಯಿಲ್ಲ
ಜೀವನದ ದಡ ಮುಟ್ಟಿಸುವೆ ದಿಟ್ಟತನದ ಛಾಯೆಯಿತ್ತು
"ನಮಗೆ ಕೈಯಿದ್ದು ಸಾಧಿಸಿದ್ದೇನು?" ಎಂಬ ಪ್ರಶ್ನೆ ನನ್ನಲ್ಲಿ ಸಮಾಧಾನ ತಂದಿತ್ತು

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...