ಈ ನೋವು ಯಾರಿಗೂ ಅರ್ಥವಾಗದು
ಪ್ರೀತಿಯ ಬೇಗೆಗೆ ಪರಿಹಾರವುಂಟೇ !
ಈ ನೋವು ಕೊಟ್ಟವಗೇ ತಿಳಿಯುವುದು
ಈ ಹೃದಯದ ಬೇಗೆ ಏನೆಂದು
ಈ ವಿರಹಾಗ್ನಿ ಮನವೆಲ್ಲ ಸುಡುತಿರಲು
ನಿನ್ನಿಂದ ಮಾತ್ರ ಸಾಧ್ಯ ಕೃಷ್ಣಾ,ಕೃಷ್ಣಾ
ಕೃಪೆ ತೋರು, ಸಂತೈಸು ಬಾ ,ಬಳಿ ಬಾ ದೇವಾ.....
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment