ಗ್ರಹಣ

ಅದೋ ನೋಡಲ್ಲಿ ಬಾನಿನಲ್ಲಿ
ತೇಲುತಿಹ ತಿಂಗಳನ ರಾಹುವೆಂಬ
ತಿಮಿರವು ಆಕ್ರಮಿಸುತಿದೆ
ನಮ್ಮ ಮನವನೂ ಕಷ್ಟಗಳ
ತಿಮಿರವು ಆಕ್ರಮಿಸಲು
ನಿದ್ದೆ ಬಾರದು,ಊಟ ಸೇರದು
ಸಾಂಕೇತಿಕವಾಗಿ ನಮ್ಮವರು
ಕಷ್ಟದಲ್ಲಿ ತೊಳಲುವಾಗ 
ನಾವು ಅವರ ಕಷ್ಟದಲ್ಲಿ ಭಾಗಿಯಾದೆವೆಂಬ ಸಮಾಧಾನ
ಕಷ್ಟಗಳು ಕಳೆಯೆ ಗ್ರಹಣ ಕಳೆದಂತೆ
ಸಂಭ್ರಮಕೆ ಕೊನೆಯೆಲ್ಲಿ
ಅನುಭವಕೆ ಹೃದಯ ಸ್ಪಂದನವಷ್ಟೆ//


ದೇವ ನಿನಗೆ ನಮಸ್ಕಾರ

ದೇವ ನಿನಗೆ ನಮಸ್ಕಾರ

ತಾಯಿಯೆಂಬ ಸ್ವರ್ಗವನೇ 
ಧರೆಯಲ್ಲಿ ನನಗೆ ನೀಡಿದ್ದಕ್ಕೆ
ಮೊದಲ ಗುರುವ ನೀಡಿದ್ದಕ್ಕೆ
ಕರುಣೆಯ ಕಡಲ ಕೊಟ್ಟಿದ್ದಕ್ಕೆ
ಮಮತೆಯ ಮಡಿಲ ನೀಡಿದ್ದಕ್ಕೆ
ಕುಟುಂಬದ ಕಣ್ಣ ನೀಡಿದ್ದಕ್ಕೆ
ಮನದ ಶಾಂತತೆಯ ಕಡಲ ನೀಡಿದ್ದಕ್ಕೆ\\

ಮೊನಚು

ನೋವಾಗಿದೆ ಮನಸಿಗೆ
ಮುಳ್ಳು ಚುಚ್ಚದೇನೆ
ಮೊನಚು ಮಾತು ಸಾಕಲ್ಲವೇ
ನೋವಾಗಲು

ಈ ನೋವಿಗೆ ಔಷಧವಿಲ್ಲವೆಂದು
ಈಗಲೇ ತಿಳಿದಿದ್ದು
ಆ ರೋಗಕ್ಕೆ ಮದ್ದೇಯಿಲ್ಲವೆಂದು
ಈಗಲೇ ಗೊತ್ತಾಗಿದ್ದು

ಎರಡಕ್ಕೂ ಕಾಲವೇ ಮದ್ದು
ನೆನೆದರೆ ಮತ್ತೆ ನೋವಾಗುವುದು
ಬದುಕಿದ್ದೂ ಶವವಾಗೋಕೆ
ಇಷ್ಟು ಸಾಲದೇ? 
ವಿಷವಿಲ್ಲದೆ  ಸಾಯೋದಕ್ಕೆ
ಇಷ್ಟು ಸಾಲದೇ? 

ಸತ್ತಮಾತು

ನಿನ್ನೆಯೇ ಸತ್ತು ಹೋಯಿತು
ಮನದ ಮಾತುಗಳೆಲ್ಲಾ
ಈಗ ಕೇಳುತಿರುವಿರಿ
ಸತ್ತ ಮೇಲೆ ಮತ್ತೆ ಜೀವ
ಹೇಗೆ ಬಂದೀತು ಹೇಳಿ
ತುಂಬಾ ತಮಾಷೆ ಮಾಡಬೇಡಿ
ಬತ್ತಿಹೋದ ಕಂಗಳಿಂದ
ಕಣ್ಣೀರು ನಿರೀಕ್ಷಿಸಬಹುದೇ?
ಭರವಸೆ ಹೃದಯದಲ್ಲಿರಲಿ
ಒಣ ಬಟ್ಟೆಯಿಂದಲೂ ನೀರು ತೆಗೆಯಬಹುದು

ಮೆಟ್ಟಿಲು

ಹದಿನೆೃದು ವರುಷಗಳಿಂದ
ಮೆಟ್ಟಿಲುಗಳಾಗಿದ್ದೇವೆ:
ಬಹಳ ಮಂದಿಗೆ ಮೇಲೇರಲು
ಸಹಾಯ ಮಾಡುತ್ತಿದ್ದೇವೆ :
ನಾವು ಅವರಿಗಷ್ಟೆ ಸೀಮಿತ
ನಾವೆಂದೂ ಮೇಲೇರಲಾರೆವು:
ನಮ್ಮ ಸಾಧನೆ ಅವರು ಮೇಲೇರುವುದಕಷ್ಟೆ
ನಾವೆಂದೂ ಮೇಲೇರಲಾರೆವು:
ನಮ್ಮ ಸಾಧನೆ ನಮಗೆ ಶೂನ್ಯ ಸಂಪಾದನೆ:
ಇನ್ನೆಷ್ಟು ಮಂದಿಗೆ ಮೆಟ್ಟಿಲಾಗಬೇಕೋ?
ಸಾಧಕರು ಮೇಲೇರುವುದು ಬೇಡವೇ?
ಕತ್ತೆ ಎಂದಾದರೂ ಕುದುರೆಯಾಗಲು ಸಾಧ್ಯವೇ?
ನಾವು ಜೀವವಿರುವ ಮೆಟ್ಟಿಲುಗಳು
ನಿರ್ಜೀವವಾಗುವತ್ತ ನಮ್ಮ ಪಯಣ:

ಸಹಿಸಿಕೋ

 ಓ ಮನಸೇ ಸಹಿಸಿಕೋ ಈ ನೋವನು
ಆ ನೋವೇ ನೀನಾಗಿಬಿಡು,ಛಲ ಬಿಡದೆ
ಕಣ್ಣೀರು ಬತ್ತಿಹೋಗುವ ತನಕ,ಸತತ:
ಒಮ್ಮೆ ನಕ್ಕುಬಿಡು ಕಾಲೆಳೆವ ಜನರ 
ನಡೆಯ ಕಂಡು,ಕಲ್ಲು ಬಂಡೆಯಾಗಿಬಿಡು
ಅವರೇ ಹಣೆಯ ಚಚ್ಚಿಕೊಳ್ಳಲಿ ಬಿಟ್ಟು ಬಿಡು,
ನಿರ್ಲಿಪ್ತನಾಗು,ಪ್ರಾಮಾಣಿಕತೆಯ ಬಿಡದಿರು, 
ನಾಳೆಗಳ ಭರವಸೆಯ ತೊರೆಯದಿರು,
ಕಾಲವೆಂದೂ ನಿಂತ ನೀರಲ್ಲ,ಅಧಿಕಾರ 
ಧರ್ಪವೆಂದೂ ಶಾಶ್ವತವಲ್ಲ,ತಾಳ್ಮೆಯ ಶಕ್ತಿ ನಿನ್ನದಾಗಲಿ

ಬಲಿಪಶು

ಮನವು ನರಳಿದೆ
ರಾತ್ರಿ ಕಗ್ಗತ್ತಲಲ್ಲಿ ಇಳಿದಿದೆ
ನೋವ ಕಣ್ಣೇರು ಜಾರಿದೆ
ಮನದ ಮೇಲೆ ಪ್ರಶ್ನೆಗಳ 
ದಾಳಿ ಮಾಡಿದೆ ನಿಲ್ಲದೆ
ಮನದ ದುಃಖ ಯಾರಿಗೆ ಹೇಳಲಿ?
ಬಲಿಪಶುವಾಗಿಹೆನು
ಬದಲಾಗದ ವ್ಯವಸ್ಥೆಯಲ್ಲಿ:
ಕಡೆಗಣಿಸಲ್ಪಟಿದ್ದೇನೆ
ನನ್ನವರಿಂದಲೇ:
ದನಿಯಿಲ್ಲದವನು ನಾನು
ಮುಖವಾಡ ಧರಿಸಬೇಕಿದೆ
ಬೂಟಾಟಿಕೆಯ ನಾಟಕವಾಡಬೇಕಿದೆ:
ಮನವು ರೋಧಿಸಿದೆ
ನಿದ್ದೆ ಕಾಣದ ಕಂಗಳು ನರಳಿದೆ
ಕಂಗಳು ನರಳಿದ ಮನವ ಸಂತೆೃಸಿದೆ


ಬಾನಿನಲ್ಲಿ

ಬಾನಿನಲ್ಲಿ ತಿಳಿ ಮೋಡ ತೇಲುತಿದೆ,
ಸ್ವತಂತ್ರ ಹಕ್ಕಿಯದು ,ದೇಶ,ಭಾಷೆ
ಗಡಿ ಪರಿದಿಗಳ ಅಡಚಣೆಯಿಲ್ಲವದಕೆ
ತೇಲುತ್ತಾ ಹಾರಾಡುವುದದರ ಕಾಯಕ:
ಒಂಟಿಯಲ್ಲ ಅದು ಹೋದಲೆಲ್ಲಾ
ಸಮಾನ ಮನಸ್ಕರು ಜೊತೆಗೂಡುವರು,
ಮನ ಭಾರವಾದಾಗ ಇಳೆಗಿಳಿಯುವುದು
ಆರದೋ ಕಣ್ಣೀರ ಒರೆಸಲು:
ಮತ್ತೆ ಪಯಣ ಗಿರಿ ಕಂದರಗಳಲ್ಲಿ
ಹರಿಯುತ್ತಾ ಸಾಗುವೆವು ಕಾಣದ ಕಡಲಿನೆಡೆಗೆ ,
ಎಷ್ಟು ದೂರವೋ ಆಯಾಸವಿಲ್ಲ ನಮಗೆ:
ತೇಲುವೆವು,ಹರಿಯುವೆವು,ಮೇಲಕ್ಕೇರಿ ನಲಿಯುವೆವು ,
ಯಾರ ಹಂಗೂಯಿಲ್ಲ
ನಮಗೆ, ನಮಗೆ ನಾವೇ ಸಾಟಿ:

ಮೂರ್ತಭಾವ

ಪ್ರಕೃತಿಯೊಡನೆ ಕಳೆದ ಸಮಯ
ಅಚ್ಚರಿಯ ರಹಸ್ಯಗಳ ಬೆರಗು
ಮೂಕವಿಸ್ಮಿತಗೊಳಿಸುವ 
ಕಲಾವಿದನ ಕೃೆಚಳಕದ ಮೂರ್ತಭಾವ
ನಮ್ಮದೆಂದುಕೊಂಡರೆ ನಮ್ಮದು
ಇಲ್ಲವೆಂದಾದರೆ ಇಲ್ಲ
ಅನುಭವಿಸುವವಗೆ ಗೊತ್ತು
ಕಾಲವೂ ನಿಂತು ಚಲಿಸುವುದೆಂದು//

ಬಚ್ಚಿಟ್ಟ ನೋವುಗಳು

ಬಚ್ಚಿಟ್ಟ ನೋವುಗಳು
ಮನದ ಒಳಗೆ ಕಾಡುತ್ತಿವೆ:
ಹೊರಬರಲಾರದೆ
ಹೇಳಿಕೊಳ್ಳಲಾಗದೆ:
ಕಾರಣ ತಿಳಿಯದೇ ಆದ
ಗೊಂದಲಗಳು 
ಬೇತಾಳದಂತೆ ಕಾಡಿವೆ:
ಮನವು ಬೇಯುತ್ತಿದೆ
ಹಚ್ಚಿದ ಬೆಂಕಿಗೆ ತಳಮಳಿಸಿದೆ
ನಿದ್ದೆ ಬಾರದಂತೆ ಮಾಡಿದೆ:
ಸುಮ್ಮನಿರಲಾರದ ನೋವು
ಮನದ ನೆಮ್ಮದಿಗೆ ಕಿಚ್ಚು ಹಚ್ಚಿದೆ:
ವರುಷಗಳು ಬೇಕು
ಮತ್ತೆ  ಚೇತರಿಸಿಕೊಳ್ಳಲು
ಸಹಿಸಲಾರೆ ಈ ನೋವ:
ಬಚ್ಚಿಟ್ಟು ಕೋ ಓ ನೋವೇ
ಕಣ್ಣುಮುಚ್ಚಾಲೆಯಾಟ ಆಡೋಣ:

ಸು-ಸಮಯವಲ್ಲ

ಇದು ಸು-ಸಮಯವಲ್ಲ ನಿನಗೆ
ನೀ ಬರವುದು ತರವೇ? ಓ ನೆನಪೇ
ಯಾಕಾಗಿ ಕಾಡುವೆ ಕಹಿ ನೆನಪೇ?
ಮನವ ಕಾಡಿ ನೋವ ತರುವೆಯೇಕೆ?

ಹೊಸವರುಷ ಬರುವ ಮುಸ್ಸಂಜೆಯ
ಹೊತ್ತಿನಲಿ ಬೆನ್ನಿಗೆ ಚೂರಿ ಬಿದ್ದಿದೆ
ನೋವು ಮುಗಿಲು ಮುಟ್ಟಿರುವಾಗ
ನೀ ಬರವುದು ತರವೇ? ಓ ನೆನಪೇ

ಆತ್ಮಸ್ಥೆೃರ್ಯವು ವಿಲವಿಲ ನರಳಿದೆ
ನೋವ ಕೇಳುವರಿಲ್ಲ,
ಕಣ್ಣೀರು ಒರೆಸುವ ಕೆೃಗಳೂ ಇಲ್ಲ
ಅಸಹಾಯಕನಾಗಿರುವಾಗ
ನೀ ಬರವುದು ತರವೇ? ಓ ನೆನಪೇ

ತವಕಿಸಿದೆ ಮನ

ತವಕಿಸಿದೆ ಮನ ,
ಮೂಡಣದಂಚಿನಲಿ
ನೆಟ್ಟಿದೆ ಮನ:
ಬೆಳಕಿನ ಹೊಂಬಣ್ಣದ
ನಗುವ ಕಾಣುವ
ತವಕ ಹೆಚ್ಚಿದೆ:
ಮಂಜು ಎಲ್ಲೆಲ್ಲೂ
ಮೊಡದ ಮರೆಯಲ್ಲೇ
ಇಣುಕುತಿಹನು ರವಿ:
ಕಾರ್ಮೋಡಗಳ
ಜೊತೆಯಲಿ ನಡೆಯುತಿದೆ
ಬೆಳಗಿನ ಕಣ್ಣು ಮುಚ್ಚಾಲೆಯಾಟ:
ಮನಸ್ಸು ಮುದಗೊಂಡು
ಹಕ್ಕಿಯಂತೆ ಸಂತಸದಿಂದೆ
ಆಗಸದಲ್ಲಿ ಹಾರಾಡಿದೆ:

ಬೇಯಬೇಕು

ಬೇಯಬೇಕು:
ಕರಗಬೇಕು:
ಹೆಜ್ಜೆಗಳ ಮುಂದಡಿಯಿಡುತ್ತಾ
ನಡೆಯಬೇಕು//

-ವಾಜಪೇಯಿ

ಸ್ವಾತಂತ್ರ

ಗುಲಾಮಗಿರಿಯ ಬೇಡಿ ಕಳಚಿದೆ
ಸ್ವಾತಂತ್ರದ ರೆಕ್ಕೆ ತೆರೆಯುತಿದೆ
ಪ್ರಪಂಚವೇ ಕೇಳಿಸಿಕೋ
ಭಾರತದ ಜಯಘೋಷವ

-ಮನಸ್ ಮದ್ರೆಚ

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...