Friday, July 12, 2013

ಅವಳ ಮಾತು ಅರಳು ಹುರಿದಂತೆ

ಅವಳ ಮಾತು ಅರಳು ಹುರಿದಂತೆ
ಏನ ಹೇಳಲಿ ದೊರೆಯೇ?
ಅವಳ ಮಾತಿನಂತೆ ನಡೆಯುವುದು ಹೇಗೆಂದು
ದಿನವೂ ಯೋಚಿಸಿ ಬಳಲಿಹೆನು ಬೆಂಡಾಗಿ
ಹೊಸ ದಾರಿ ಸಿಗದೆ ಅವಳ ಮುನಿಸಿಗೆ ಆಹಾರವಾಗಿಹೆನು||

ನೂರು ಬಾರಿ ಹೇಳಿದೆನು ಬದಲಾಗುವೆನು ನಾನೆಂದು
ಒಮ್ಮೆ ಕೂಡ ಬದಲಾಗದೆ ಹಾಗೇ ಕಾಲ ತಳ್ಳಿದೆನು
ಮುನಿದಾಗ ಅವಳ ಮಾತು ನೆನಪಿಗೆ ಬರುವುದೆನಗೆ
ನಾನು ಬದಲಾಗಬೇಕೆಂದು, ದಾರಿ ಕಾಣದೆ ಮೌನ ಮುನಿಯಾಗುವೆನು||

ಎಷ್ಟು ಸಲ ಹೀಗೆ ನಡೆದಿಹುದೋ ಲೆಕ್ಕವಿಲ್ಲ
ಸಧ್ಯಕ್ಕೆ ಇದಕ್ಕೆ ಪೂರ್ಣವಿರಾಮ ಹಾಕುವ ಕಾಲ ಬಂದಿಲ್ಲ
ಹೀಗೆ ನಡೆಯುತಿಹುದು ನಮ್ಮಯ ಬಾಳ ಪಯಣ
ಅವಳ ಮಾತು ಅರಳು ಹುರಿದಂತೆ,
                ನನ್ನದೋ ಹೂಂ ಗುಟ್ಟುವ ಋಷಿಯಂತೆ||

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...