ವರುಷಗಳೇ ಉರುಳುವುವು
ಯಾರಿಗೂ ಕಾಯದೆ,
ನನ್ನ ದೇಶದ ಘನತೆ,
ಗೌರವ ಎಂದೂ ಮಾಸದಿರಲಿ.
ನನ್ನ ದೇಶದ ಆತ್ಮ,
ಅದು ಸನಾತನ, ನಿತ್ಯ ನೂತನ,
ತಾಯಿ ಭಾರತೀಯ
ಹೆಮ್ಮೆ, ಘನತೆಯ ನಾವು ಕಾಯುವ.
ದೇಶ ದ್ರೋಹಿಗಳು
ಹಲವಾರು ಇಹರು ಇಂದು ಇಲ್ಲೇ,
ಉಪ್ಪು ತಿಂದ
ಮನೆಗೆ ಎರಡು ಬಗೆಯಲು ಸದಾ ಮುಂದು.
ಅವಳ ಕರುಣೆ ನಮ್ಮ
ಮೇಲಿರಲಿ ಅವರ ಸದೆಬಡಿಯಲು,
ಪ್ರಾಣ ಇಂದೇ
ಮುಡಿಪು, ಅವಳ ಗೌರವ ಕಾಪಾಡಲು.
ಇಂದು ಇಹರು ದೇಶ
ಪ್ರೇಮಿಗಳಿ ಅವಳ ಕಾಯುತಾ,
ಸಮಯ ಒದಗಿ ಬರಲು
ಪ್ರಾಣವನೇ ನೀಡುವರು.
ತಾಯ ಸೇವೆಗೆ
ಸದಾಸಿದ್ಧ, ಹೃದಯದಲಿ ಕಾಣ್ವರೂ,
ದೇಶದ್ರೋಹಿಗಳ
ಮುಖವಾಡ ಕಳಚಿ, ಘರ್ಜಿಸುವರು.

No comments:
Post a Comment