Saturday, March 14, 2026

ಸತ್ಯದ ಕನ್ನಡಿ

ಪ್ರತಿದಿನ ಕನ್ನಡಿಯ ಮುಂದೆ ನಿಲ್ಲು,

ಮುಖವಾಡ ಕಳಚುವುದು ದಿಟ.

ನಿನ್ನದಲ್ಲದ ಭಾವಗಳು ನರ್ತಿಸುವುದು,

ಸತ್ಯದ ಅನಾವರಣ ಕಣ್ಣಮುಂದಾಗುವುದು.


'ಅಹಂ' ನ ಪೊರೆ ಕಳಚುವುದು,

ನಿಜದ ಮೌಲ್ಯವ ನೀ ಅರಿತು ಕೋ.

ನಕ್ಕುಬಿಡು ನಿನ್ನ ಮೂರ್ಖತನಕೆ,

ಬದಲಾಗು, ನಡೆ ಸತ್ಯದ ಹಾದಿಯಲ್ಲಿ.


ಸೋಲು ಮಳೆಯಂತೆ,

ಮನದ ನೋವ ತೊಳೆವುದು.

ಕಣ್ಣ ಪೊರೆ ಕಳಚಿ,

ಸತ್ಯ ದರ್ಶನ ಮಾಡಿಸುವುದು.


ಧೈರ್ಯದಿಂದ ನಡೆ,

ಪ್ರಾಮಾಣಿಕತೆಯಿಂದ ನಡೆ.

ಮನದ ಕನ್ನಡಿಯಲ್ಲಿ ನೋಡು,

ನಿನ್ನ ನೀ ಅರಿವ ಹಿರಿಮೆಯ ಕಾಣು.

No comments:

Post a Comment

ನಾವು ಚೇತನರು

 ಕತ್ತಿಯಿಂದ ತಿವಿದರು, ಬಂದೂಕು ಗುಂಡುಗಳಿಂದ ಸುಟ್ಟರು, ದೇವಸ್ಥಾನಗಳ ಲೂಟಿ ಮಾಡಿದರು, ನಮ್ಮವರ ಸಮಾಧಿಯ ಮೇಲೆ ಅವರ ವೈಭವ, ಕಾಲ ಎಲ್ಲವ ಮರೆಯಿಸಿದೆ, ಸೂರ್ಯ ಮತ್ತೆ ಸುಡುತ್...