ಈ ಸಮಯ ಅತ್ಯಮೂಲ್ಯ,
ಮುಂದೆಂದೂ
ಬಾರದು ಗೆಳೆಯಾ.
ಸಮಯ
ಹರಿಯುವ ನದಿಯಂತೆ,
ಹಿಂತಿರುಗಿ
ಬಾರದು ಎಂದೂ.
ಹಣ
ಮತ್ತೆ ಸಂಪಾದಿಸಬಹುದು,
ಸಮಯ
ಮರಳಿ ಬಾರದು ಗೆಳೆಯ.
ಪ್ರತಿ
ಕ್ಷಣ ಅಮೂಲ್ಯ ಗೆಳೆಯ,
ವ್ಯರ್ಥ
ಮಾಡಬೇಡ ಗೆಳೆಯ.
ಅಧ್ಯಯನ,
ಆರೋಗ್ಯ, ಕನಸುಗಳ ದಾರಿ,
ಸಮಯವನ್ನು
ಜಾಣ್ಮೆಯಿಂದ ಬಳಸು.
ಕೊನೆಯ
ಹೊತ್ತಿನಲ್ಲಿ ನೆನಪಿಸಿಕೋ,
ಮಾಡಿದ
ಅರ್ಥಪೂರ್ಣ ಕಾರ್ಯವ.
ಮರುಗದಿರು
ಕೊನೆಯಲ್ಲಿ,
ವ್ಯರ್ಥಮಾಡಿದೆ
ಎಂದು.