Saturday, April 18, 2026

ನನ್ನ ಪಯಣ

ನಾನು ಉಸಿರಾಡುತ್ತಿದ್ದೇನೆ,

ನನ್ನ ಜೀವನ ಪ್ರೀತಿಯಿಂದ.

ನಾನು ಮೌನವಾಗಿದ್ದೇನೆ,

ನನ್ನ ಸಮಯಕ್ಕೆ ಕಾಯುತ್ತಾ.

ನಾನು ಸಂತೋಷವಾಗಿದ್ದೇನೆ,

ನನ್ನತನವ ಉಳಿಸಿಕೊಳ್ಳುತ್ತಾ.

ನಾನು ಹೋರಾಡುತ್ತಿದ್ದೇನೆ,

ನನ್ನ ಜೀವನದ ಅರ್ಥ ಹುಡುಕುತ್ತಾ.

ನಾನು ಪ್ರಾರ್ಥಿಸುತ್ತಿದ್ದೇನೆ,

ನನ್ನ ಬದುಕ ಹಸನಾಗಿಸಲು.

ನಾನು ಹಾರಾಡುತ್ತಿದ್ದೇನೆ,

ನನ್ನ ದಿನವ ಸಂಭ್ರಮಿಸಿ ಹಾಡಲು.

ನಾನು ಕಣ್ಣೀರಿಡುತ್ತಿದ್ದೇನೆ,

ನನ್ನ ದೇವನ ಋಣವ ತೀರಿಸಲು.

No comments:

Post a Comment

ನನ್ನ ಪಯಣ

ನಾನು ಉಸಿರಾಡುತ್ತಿದ್ದೇನೆ , ನನ್ನ ಜೀವನ ಪ್ರೀತಿಯಿಂದ . ನಾನು ಮೌನವಾಗಿದ್ದೇನೆ , ನನ್ನ ಸಮಯಕ್ಕೆ ಕಾಯುತ್ತಾ . ನಾನು ಸಂತೋಷವಾಗಿದ್ದೇನೆ , ನನ್ನತನವ ...