Tuesday, March 31, 2026

ಪ್ರಾರ್ಥನೆ


ನನ್ನ ದೇವನೇ, ಕೋಪವೇತಕೆ?

ಕರೆದರೂ ಕೇಳಿಸದೇ?

ನೋವುಂಡ ಜೀವಕ್ಕೆ ಆಸರೆಯಾಗಲಾರೆಯಾ!

ಕೋಪದಿಂದ ನಾನು ನಿನ್ನ ನಿಂದಿಸುವೆನು,

ಅದಕ್ಕೆ ಕೋಪವೇ!,

ದೂರುವೆನು, ಅದಕ್ಕೆ ಸಿಟ್ಟೇ ನನ್ನ ದೇವರೇ!

ನನಗಾರು ಎನ್ನುವಾಗ,

ನೀನಿರುವೆ ಎಂದು ನಂಬಿಹೆನು,

ನಿನಗಾಗಿ ಪರಿತಪಿಸುವೆ,

ನಿನ್ನನ್ನೇ ಪ್ರೀತಿಸುವೆ,

ನಿನ್ನನ್ನೇ ಪ್ರಾರ್ಥಿಸುವೆ,

ನಿನ್ನಲ್ಲಿ ಒಂದಾಗ ಬಯಸಿಹೆ ತಂದೇ.

No comments:

Post a Comment

ಪ್ರಾರ್ಥನೆ

ಓ ನನ್ನ ದೇವನೇ , ಕೋಪವೇತಕೆ ? ಕರೆದರೂ ಕೇಳಿಸದೇ ? ನೋವುಂಡ ಜೀವಕ್ಕೆ ಆಸರೆಯಾಗಲಾರೆಯಾ ! ಕೋಪದಿಂದ ನಾನು ನಿನ್ನ ನಿಂದಿಸುವೆನು , ಅದಕ್ಕೆ ಕೋಪವೇ !, ...