ಕಾಲ ನಿಲ್ಲದು ನದಿಯಂತೆ ಹರಿವುದು,
ಕ್ಷಣಗಳಂತೆ
ಮಾಯ ಮರಳಿ ಬಾರದು.
ವ್ಯರ್ಥ
ಮಾಡದೆ, ಸಮಯ ಕಾಪಾಡಿಕೋ,
ಕಾಲನ
ಜೊತೆ ಹೆಜ್ಜೆಹಾಕುವುದ ಕಲಿತುಕೋ.
ನಿನ್ನೊಳಗಿನ
ಶಕ್ತಿ ಅಖಂಡ ಸೂರ್ಯನಂತೆ,
ತನು
ಮನಗಳ ಆರೋಗ್ಯದಿ ಬೆಳೆಸುವುದು.
ತನು
ಮನವ ಸಂತೋಷದಿ ಹುರಿಗೊಳಿಸು,
ವಿಶ್ರಾಂತಿಯ
ಆಶ್ರಯಿಸಿ ಬಲವ ಇಮ್ಮಡಿಸು.
ಹಣವು
ನಮ್ಮ ಸಾಧನೆಯ ಸಲಕರಣೆ,
ವೆಚ್ಚ
ಮಾಡದೆ ಸಮಯೋಚಿತವಾಗಿ ಬಳಸು.
ಜಾಣ್ಮೆಯಲಿ
ವೆಚ್ಚಮಾಡು, ಜತನದಿ ಹೂಡು,
ಚಲನಶೀಲತೆಯಲ್ಲಿ
ಅಭಿವೃದ್ಧಿ ಮಾಣು.
ಮೂರೂ
ಸಂಪತ್ತು, ಸರಳ ಅಮೂಲ್ಯ,
ನಮ್ಮ
ಬೆಳವಣಿಗೆಯ ಬೀಜಮಂತ್ರಗಳು.
ಮನ
ಹೃದಯದಿ ಬೆಳವಣಿಗೆಗೆ ಬಳಸು,
ಗೆಲುವಿನ
ಅನಂತ ಹೆದ್ದಾರಿಯ ಕಾಣು.

No comments:
Post a Comment