Saturday, June 28, 2025

TIEI ಗೀತೆ

 ಜೈ ಹೋ, ಜೈ ಹೋ, TIEI ಗೆ ಜೈ ಹೋ,

ಜಪಾನ್-ಭಾರತ ಮೈತ್ರಿಗೆ ಜೈ ಹೋ,

ಟೊಯೋಟಾ-ಕಿರ್ಲೋಸ್ಕರ್ ಸ್ನೇಹಕ್ಕೆ ಜೈ ಹೋ.।।

 

ಕರುನಾಡ ಬನ್ನೇರುಘಟ್ಟ ಜಿಗಣಿ ಗ್ರಾಮದಿ ನೆಲೆಸಿಹೆವು,

ಜವಳಿ ಯಂತ್ರಗಳ ಉತ್ಪಾದನೆ, ಕನ್ನಡಿಗರ ಕಣ್ಮಣಿಯಾದೆವು,

ಜವಳಿಯಂತ್ರಗಳ ವ್ಯವಹಾರ ಭಾರತಾಧ್ಯಂತ ಬೆಳೆಯಿತು,

ಹೊಸ ಇಂಜಿನ್ ಉತ್ಪಾದನಾ ಘಟಕವು ಉದಿಸಿತು.।।

 

ನೆಲ,ಜಲ, ಕಾನೂನಿಗೆಂದಿಗೂ ಗೌರವ ಕೊಡುವೆವು,

ಸಂಸ್ಕೃತಿ, ಪರಂಪರೆ, ಅಭಿವೃದ್ಧಿಗೆ ಫಣತೊಟ್ಟಿರುವೆವು,

ನ್ಯಾಯ, ನೀತಿ, ಬದ್ಧತೆ, ತತ್ವಗಳನೆಂದೂ ಬಿಡೆವು,

ನವೀನ ತಂತ್ರಜ್ಞಾನದ ಉತ್ಪನ್ನಗಳ ನೀಡುವೆವು.।।

 

ಹೃದಯ ಮುಟ್ಟಿ ಹೇಳುವೆವು ಸಹೋದ್ಯೋಗಿಗಳೇ ಮೊದಲು,

ಸಮಸ್ಯೆಗಳ ಪರಿಹಾರಕ್ಕೆ ಗುಣಮಟ್ಟವೃತ್ತವೇ ಅಸ್ತ್ರವು,

ಸುರಕ್ಷತೆ, ಗುಣಮಟ್ಟಕ್ಕೆ ಎಂದಿಗೂ ಮೊದಲ ಪ್ರಾಶಸ್ತ್ಯವು,

ಸ್ವಚ್ಛತೆ, ಪ್ರೌಢತೆ,ಬದ್ದತೆಯೇ ಉತ್ಪಾದನೆಯ ಆಧಾರವು.।।

 

ನಾವೆಲ್ಲರೂ ಒಂದು ತಂಡ, ಒಂದೇ ಕುಟುಂಬ,

ಹೆಮ್ಮೆಯ TIEI ಪಾಲಿಸುವುದು ವಸುದೈವ ಕುಟುಂಬ,

ಜಗದ ಅತ್ಯತ್ತಮ ಇಂಜಿನ್ ಉತ್ಪಾದಕ ಪಟ್ಟವ ಗಾಳಿಸುವೆವು,

ಗ್ರಾಹಕರ ಅತ್ಯತ್ತಮ ಆಯ್ಕೆಯ ಸಂಸ್ಥೆ ನಾವೇ ಆಗುವೆವು||

No comments:

Post a Comment

ಅಪರಿಚಿತ ಅತಿಥಿ

  ಬಾ , ಓ   ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।।   ಚಳಿಗಾಳಿ ಹೆದರಿ ಓಡಿಹೋ...