Sunday, June 29, 2025

ಆಯ್ಕೆಯ ನೆರಳು

 

ಆಯ್ಕೆಯೇ ಬದುಕಿನಲಿ ತರುವುದು ವ್ಯತ್ಯಾಸ,

ಜೀವನದ ಹಾದಿಯಾಗುವುದು ಅದೊಂದು ರೂಪಕ.

ಗೊಂದಲ, ಕವಲು ದಾರಿಯಲ್ಲಿರುವುದು ಆಯ್ಕೆ,

ನಾವು ಏನೋ!, ಆಯ್ಕೆಯೇ ನಮ್ಮ ಬದುಕ ಶಿಲ್ಪಿ.

 

ಕೆಟ್ಟ ನೆನಪುಗಳು ಸಮುದ್ರದ ಅಲೆಗಳಂತೆ,

ಮತ್ತೆ, ಮತ್ತೆ ಮನಕ್ಕೆ ಅಪ್ಪಳಿಸುವುದು.

ನಿಂತ ನೀರಾಗುವ ಬಯಕೆಯೋ!, ಆಲಸ್ಯವೋ!,

ಅಡೆ -ತಡೆಗಳ ಮೀರಿ ಕಡಲ ಸೇರುವ ತವಕವೋ?.

 

ಆಯ್ಕೆ ನಿನ್ನದೇ!, ದೂರುವುದು ಬೇರೊಬ್ಬರನ್ನು,

ಪರಿಸ್ಥಿತಿಯೋ!,ಪ್ರಸಂಗವೋ!, ಆಯ್ಕೆ ಮಾಡಿದವನು ನೀನೇ.

ವಿವೇಚಿಸದೆ,ಆಲೋಚಿಸದೆ ಕ್ಷಣದ ಸುಖಕ್ಕೆ,

ಅಯ್ಜೆ ಮಾಡಿದವನು ನೀನೇ, ನಿನ್ನ ಆಯ್ಕೆಯಂತೆ ನೀನು.

 

ನಿರಾಸೆಯೋ!, ಸಂತಸವೋ!, ನಿನ್ನ ಆಯ್ಕೆಯ ಫಲ,

ಅನುಭವಿಸುವವರು ನಾವೇ, ಕರ್ಮದಂತೆ ಫಲ.

ಅರಿವಿನ ಬೆಳಕಿನಂತೆ ಕಾಣುವುದು ದಾರಿ,

ವಿವೇಚಿಸಿ ಆಯ್ಕೆ ಮಾಡಿಕೊಳ್ಳುವುದೇ ರಹದಾರಿ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...