ವ್ಯಾಪಾರ ನನ್ನ ಕಸುಬು ಜೀವನೋಪಾಯಕ್ಕೆ ;
ಮಾರಲಿದೆ
ಅನೇಕಾನೇಕ ಮುತ್ತು, ಹವಳಗಳ ಹಾರಗಳ;
ಬಹಳ
ವರ್ಷಗಳಿಂದ ನಡೆದಿದೆ ಈ ವ್ಯಾಪಾರ;
ಮುಗಿಸುವುದಕ್ಕೆ
ಕುಳಿತಿಹೆನು ಅಂಗಡಿಯ ತೆರೆದು;
ದೇಹದಲ್ಲಿ
ಮುಪ್ಪು,ಲೋಕವ್ಯಾಪಾರವ ಮುಗಿಸಲು ತವಕವಿದೆ;
ಕೈಯಲ್ಲಿ
ಎಣಿಸುತ್ತಿದ್ದೇನೆ, ಮುಗಿಯುವುದೆಂದಿಗೆ ಈ ವ್ಯಾಪಾರ?
ಹುರುಪಿಲ್ಲ
ದೇಹದಲ್ಲಿ ಯೌವ್ವನದಲ್ಲಿದ್ದಂತೆ;
ಜೀವನ
ಪ್ರೀತಿಯಿದೆ ಹಿಂದೆಂದಿಗಿಂತಲೂ ಹೆಚ್ಚು;
ಅನುಭವದಿಂದ
ತನುಮನಗಳೆರಡೂ ಹಣ್ಣಾಗಿದೆ;
ಈ
ಲೌಕಿಕ ವ್ಯಾಪಾರ ಹೊಟ್ಟೆ-ಬಟ್ಟೆಗಷ್ಟೇ! ಲಾಭಕ್ಕಲ್ಲ;
ಗಂಟುಮೂಟೆ
ಕಟ್ಟಿಯಾಗಿದೆ, ಅವನ ಕರೆಗೆ ಕಾಯುತಿಹೆನು;
ಬನ್ನಿ,ಬನ್ನಿ ನೀವು ನನ್ನ ಬಳಿ
ವ್ಯಾಪಾರ ಮಾಡಿ;
ಕೊಳ್ಳಿ
,ಕೊಳ್ಳಿ ಅಮೂಲ್ಯ ಹಾರಗಳ ತುಲನೆ ಮಾಡಿ ;
ಹಣದ
ಲಾಭದ ಚಿಂತೆಯಿಲ್ಲ, ನಾಳೆಯ ಹಂಗಿಲ್ಲವೆನಗೆ;
ನಾಳೆ
ಎನ್ನದಿರಿ! ನಾಳೆಯೆನ್ನವುದರಲ್ಲಿದೆ ನನಗೆ ಅನುಮಾನ;
ಮನದೊಳು
ಧ್ಯಾನ, ಒಂದು ದಿನದ
ವ್ಯಾಪಾರ ಮುಗಿಸಲು ;
ಇನ್ನೊಂದು
ಲೋಕ ವ್ಯಾಪಾರವ ಮುಗಿಸಲು;
ನಾನು
ಕಾಯುತಿಹೆನು; ನಾನು ಕಾಯುತಿಹೆನು;
ಅವನು
ಬರುವನೋ? ಇಲ್ಲ, ಇವನು ಬರುವನೋ?
ಯಾರು
ಮೊದಲು ಬರುವರೋ ನಾ ಕಾಣೆ!
No comments:
Post a Comment