Wednesday, January 15, 2020

ಜೀವನಯಾನ

ಕಣ್ಣುಮುಚ್ಚಿ ತೆಗೆಯುವುದರೊಳಗೆ
ವರುಷಗಳೇ ಉರುಳಿಹೋಗಿದೆ
ಅಂತರಾಳದ ದುಃಖ ಬಾಯ್ತೆರೆದು
ಸಂತಸದ ಕ್ಷಣಗಳನೆ ನುಂಗಿದೆ ।।

ನಾನು ಪ್ರೀತಿಸಿದ ಗೆಳೆಯರು
ಬಂದರು, ಅಲೆಯಂತೆ ಹೋದರು
ಕಾಲಮಾತ್ರ ಮುಂದೆ ಸಾಗಿದೆ ನಿಲ್ಲದೆ
ಗಾಳಿ ಬಂಡ ಕಡೆ ನಾವು ತೆರೆಳಿದೆವು||

ಜೀವನ ಎಂದೂ ಸುಖದ ಹಾದಿಯಲ್ಲ
ಕಷ್ಟ ಪರಿಶ್ರಮಗಳೇ ತುಂಬಿವೆ ದಿನನಿತ್ಯ
ದಿನದ ಪಾತ್ರಯೊಳ ಮೌಲ್ಯವೀ ಕಾಲ
ಹಾಳುಮಾಡಿದೆವು ಅರ್ಥಮಾಡಿಕೊಳ್ಳದೆ।।

ನಮ್ಮ ಕಾಲ ಮೇಲೆ ನಾವು ನಿಂತಿದ್ದೇವೆ
ನಮ್ಮ ದಾರಿಯೂ ನಮಗೆ ತಿಳಿದಿದೆ
ರಾತ್ರಿಯ ಕತ್ತಲ್ಲಲ್ಲಿ ಜೋಗುಳದ ಕಣ್ಣೀರು
ಕತ್ತಲು ಕಳೆದು ಹೊಸದಿನ ಮೂಡಲು ತಿಳಿಮನ||

ಹತ್ತು ಹಲವು ವಸ್ತುಗಳ ಖರೀದಿಸಿದೆವು
ಯಾವುವೂ ನೀಡಲಿಲ್ಲ ಮನದಲ್ಲಿ ತೃಪ್ತಿ
ನೋವು,ಸಂಕಟ ದುಗುಡ ದಿನವೂ
ಬೆಳೆಯುತ್ತಿದೆ ನಾವೇ ಬೆಳೆಸಿದ ಬೆಳೆಯಾಗಿ||

ಎಲ್ಲಿಂದ ಬಂದವೋ ನಾ ಕಾಣೆ
ದುಗುಡವೆಲ್ಲವೂ ಮಂಗಮಾಯ ದಿನದಾಂತ್ಯದಲ್ಲಿ
ನಿಟ್ಟುಸಿರು ,ಸಮಾಧಾನ ಎಲ್ಲಾ ದಿಕ್ಕಿನಿಂದ
ನಾವು ಮಾಡಿದ ಅದಾವುದೋ ಉಪಕಾರದಿಂದ||

ಪ್ರೇರಣೆ: ಅನಾಮಿಕ

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...