ನನ್ನ ಜೀವನ ದಾರಿಕಾಣದೆ
ಒಮ್ಮೊಮ್ಮೆ ಬೇಸರ ಮೂಡಿಸುತ್ತದೆ
ಇರಲಾರದೆ ಮನ ಚಡಪಡಿಸುತ್ತಿದೆ
ದೂರದಿಂದ ನೋಡುವವರಿಗೆ ಅದೇ ಅಚ್ಚರಿ
ನನ್ನ ಜೀವನದ ಕನಸು ಅವರಿಗೆ .....
ಹಳ್ಳಿಯ ಕಾಲುದಾರಿಯಲ್ಲಿ ಸಾಗುವ ಮಗುವಿಗೆ
ಆಕಾಶದಲ್ಲಿ ಹಾರುವ ವಿಮಾನದಲ್ಲಿ ತೇಲುವ ಕನಸು
ಸ್ವಚ್ಚಂದವಾಗಿ ಓಡಾಡುವ ಹಳ್ಳಿಯ ಮಗುವ
ಕಾಣುವ ವಿಮಾನದ ಚಾಲಕನಿಗೆ
ಹಳ್ಳಿಯ ಮಗುವಾಗುವ ಕನಸು ಅವನಿಗೆ....
ಅದೇ ಜೀವನ, ನಮ್ಮದು ಅದ ಅನುಭವಿಸಬೇಕು
ಸಂಪ್ಪತ್ತೇ ಜೀವನದ ಸುಖವಾದಲ್ಲಿ
ಶ್ರೀಮಂತರೆಲ್ಲಾ ರಸ್ತೆಗಳಲ್ಲಿ ಕುಣಿದಾಡುತ್ತಿದ್ದರು
ಆದರೆ ಬಡವರ ಮಕ್ಕಳು ರಸ್ತೆಗಳಲ್ಲಿ ಕುಣಿವರು....
ಅಧಿಕಾರವೇ ರಕ್ಷಣೆಯ ಪರ್ಯಾಯವಾಗಿದ್ದರೆ
ಅಧಿಕಾರಿಗಳು,ರಾಜಕಾರಣಿಗಳಾರೂ
ಪೋಲೀಸರ ರಕ್ಷಣೆ ಪಡೆಯುತ್ತಿರಲಿಲ್ಲ...
ಸಾಮಾನ್ಯರೇ ಹೆಚ್ಚು ಸುರಕ್ಷಿತರು ಹಾಗು ಪರಮ ಸುಖಿಗಳು ....
ಸೌಂದರ್ಯ ಹಾಗು ಪ್ರಖ್ಯಾತಿ ಒಳ್ಳೆಯ
ಸಂಬಂಧಗಳನ್ನು ಬಲಪಡಿಸುವಂತಿದ್ದರೆ
ಪ್ರಖ್ಯಾತರು,ತಾರೆಗಳೆಲ್ಲರದ್ದೂ ಒಳ್ಳೆಯ ದಾಂಪತ್ಯವೆನಿಸುತ್ತಿತ್ತು...
ಸರಳವಾಗಿ ಬಾಳು,
ನಮ್ರನಾಗಿ ಒಂಟಿಯಾಗಿ ಹೆಜ್ಜೆ ಹಾಕು,
ಪ್ರೀತಿ ಮೌಲ್ಯಯುತವಾಗಿರಲಿ
ಎಲ್ಲವು ಒಳ್ಳೆಯದೇ ಆಗುವುದು
ನಮ್ಮ ಹಾದಿ ಒಳ್ಳೆಯ ದಾರಿಯೇ ಆಗುವುದು ....
ಪ್ರೇರಣೆ: ಅನಾಮಿಕ
Wednesday, January 15, 2020
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment