Thursday, May 7, 2015

ಕಾಣದ ನಿರೀಕ್ಷೆ

ಕಾಣದ ನಿರೀಕ್ಷೆಗಳು  ಕದಡಿದೆ ಮನ 
ದಾರಿ ಕಾಣದೆ ತೊಳಲಾಡಿದೆ ಮನ
ನಿರೀಕ್ಷೆಗಳು ಮನದಲ್ಲಿ ಮೂಡಿಸಿವೆ
ಭಯಸಹಿತ ಪರೀಕ್ಷೆಯ ವಾತಾವರಣ
ಭರವಸೆಗಳೆಲ್ಲಾ ಹುಸಿಯಾಗುವ ಭ್ರಮೆ
ಮನದ ಶಾಂತತೆಯ ಕಡಲ ಕದಡಿದೆ
ಆದದ್ದು ಆಗಲಿ ನಿರ್ಲಿಪ್ತನಾಗುವೆಡೆ
ಮನದಲ್ಲಿ ಆತಂಕದ ಸಂಚಲನ ತಂದಿದೆ
ಗೂಸುಂಬೆಗಳ ತೆರದಿ ಬಣ್ಣ ಬದಲಿಸುವ
ದಿನದಿನದ ವರಸೆಗಳಿಂದ ಮನಸ್ಸು ನೊಂದಿದೆ
ಅನಿವಾರ್ಯತೆ ಎಲ್ಲಾ ಕಡೆಗಳಿಂದಲೂ
ದಾಳಿ ಮಾಡಿ ವಾಚ ಮನಸಾ ಹೆಳವನನ್ನಾಗಿಸಿದೆ
ಇರುವ ಹಾಗೆ ಮುರುಟಿದ ಮನದಲ್ಲೇ
ಸುಖಪಡುವ ಕುಂಟುನಾಯಿಯಾಗಿದೆ ಮನದ ಸ್ಥಿತಿ
ಗಿಡದಿಂದ ಬೇರಾದರೂ ಹೂವು ನಗುವ
ಸೂಸುವ ಪರಿ ಮನದ ಕತ್ತಲಲ್ಲಿ ಆಶಾಭಾವನೆ ಮೂಡಿದೆ

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...