Sunday, May 10, 2015

ತಡೆಗೋಡೆ

ಮುಕ್ತ ಅವಕಾಶಗಳ ಹೆದ್ದಾರಿಯಲ್ಲಿ
ಈ ತಡೆಗೋಡೆ ಏಕೆ?
ಹೆದರಿಕೆಯೇ?ಸ್ವಾರ್ಥವೇ?
ಅಥವಾ ವೃತ್ತಿದ್ವೇಷವೋ?
ಮುಂದೆ ದಾರಿ ತೋರದ ಹಿರಿಯರು
ಕಾಲೆಳೆದು ಹಿರಿಹಿರಿ ಹಿಗ್ಗುವರೇ?
ಪಿರಿತನಕೆ ಗೌರವ,ಹಿರಿಮೆ-ಗರಿಮೆಗಳಿಗೆ
ಇವರ ನಡೆ ಅಪಚಾರವೆಸಗಿದಂತೆ ಸರಿ
ಇತಿಹಾಸ ಇವರ ಕ್ಷಮಿಸದು
ಎಂದೂ ಕ್ಷಮಿಸದು
ಧಿಕ್ಕಾರವಿರಲಿ ಅವರಿಗೆ
ಧಿಕ್ಕಾರವಿರಲಿ ಅವರಿಗೆ....

No comments:

Post a Comment

ನಾಳೆ ಏನು?

  ಇಂದೇನೋ ಮುಗಿಯಿತು , ನಾಳೆ ಏನು ? ಬೆಳಕು ಮುಗಿದು ಕತ್ತಲ ಹೊಳೆ ಹರಿದಿದೆ ; ಇಂದೇನಾಯಿತು ? ಅವಲೋಕಿಸು ಮಲಗುವ ಮುನ್ನ ; ಪ್ರಶ್ನೆಗಳಿರಲಿ ಮನದಲ್ಲಿ ಅರ...