ಆವ ಭಾಗ್ಯವಿದ್ದೊಡೇನು?

ಆವ ಭಾಗ್ಯವಿದ್ದೊಡೇನು?
ಮನದಲ್ಲಿ ನೀನಿಲ್ಲದ ಮೇಲೆ
ಮನದಲ್ಲಿ ಚೈತನ್ಯವಿಲ್ಲದ ಮೇಲೆ
ಏನು ಬಂದರೇನು ಎಲ್ಲವೂ ವ್ಯರ್ಥವೇ!
ನನ್ನ ಅರ್ಥವಿಲ್ಲದ ಬದುಕಿಗೆ
ನೀನು ಬೆಳಕಾಗ ಬೇಕು
ನೀ ಬರುವ ಹಾದಿಯಲ್ಲಿ
ಬರಿದಾದ ಈ ಹೃದಯವ 
ತೆರೆದು ಸ್ವಾಗತಿಸುತಿರುವೆ
ಶರಣಾಗಿ ಕನಿಕರಿಸೆಂದು ಬೇಡುತಿಹೆನು

ಸಾಕೆನಗೆ

ಮಂತ್ರಗಳ ನಾನರಿಯೆ,
ತಂತ್ರಗಳ ನಾನರಿಯೆ, 
ನಿನ್ನ ಕರುಣೆಯೊಂದೇ ಸಾಕೆನಗೆ||

ಮಂತ್ರ ಬೇಡ,
ತಂತ್ರ ಬೇಡ,
ನಿನ್ನ ಪ್ರೀತಿಯೊಂದೇ ಸಾಕೆನಗೆ||

ಶಕ್ತಿ ಬೇಡ,
ಯುಕ್ತಿ ಬೇಡ,
ನಿನ್ನ ಕೃಪಾಕಟಾಕ್ಷವೊಂದಿರೆ ಸಾಕೆನಗೆ||

ಅಷ್ಟೈಶ್ವರ್ಯಗಳು ಬೇಡ,
ಸುಖ-ಸಂತೋಷಗಳು ಬೇಡ
ನಿನ್ನ ಕೊಂಡಾಡುವ ಮನವೊಂದಿರೆ ಸಾಕೆನಗೆ||

ಅಮ್ಮ

ಕರುಣೆಯ ಕಡಲು ಎನ್ನಲೆ
ವಾತ್ಸಲ್ಯದ ಗಣಿ ಎನ್ನಲೆ
ನೋವನುಂಡರೂ 
ಜೀವ ತೇಯ್ದರೂ
ಪ್ರೀತಿಯ ಒರತೆಯವಳು
ದೇವರೆನ್ನಲೆ?
ಸ್ತ್ರೀ ಎನ್ನಲೇ?
ಹೆಣ್ಣೆನ್ನಲೆ?
ಜೀವನಪ್ರೀತಿ ಎನ್ನಲೇ?
ಅಮ್ಮ,ಅಮ್ಮ ಎಂದರಷ್ಟೆ ಸಾಲದೆ?

ತಡೆಗೋಡೆ

ಮುಕ್ತ ಅವಕಾಶಗಳ ಹೆದ್ದಾರಿಯಲ್ಲಿ
ಈ ತಡೆಗೋಡೆ ಏಕೆ?
ಹೆದರಿಕೆಯೇ?ಸ್ವಾರ್ಥವೇ?
ಅಥವಾ ವೃತ್ತಿದ್ವೇಷವೋ?
ಮುಂದೆ ದಾರಿ ತೋರದ ಹಿರಿಯರು
ಕಾಲೆಳೆದು ಹಿರಿಹಿರಿ ಹಿಗ್ಗುವರೇ?
ಪಿರಿತನಕೆ ಗೌರವ,ಹಿರಿಮೆ-ಗರಿಮೆಗಳಿಗೆ
ಇವರ ನಡೆ ಅಪಚಾರವೆಸಗಿದಂತೆ ಸರಿ
ಇತಿಹಾಸ ಇವರ ಕ್ಷಮಿಸದು
ಎಂದೂ ಕ್ಷಮಿಸದು
ಧಿಕ್ಕಾರವಿರಲಿ ಅವರಿಗೆ
ಧಿಕ್ಕಾರವಿರಲಿ ಅವರಿಗೆ....

ಇದಕ್ಕೇನೆನ್ನಬೇಕೋ?

ಇದಕ್ಕೇನೆನ್ನಬೇಕೋ?
Discrimination ಎನ್ನಲೋ?
ಅಸ್ಪೃಷತೆ,ಅಸಮಾನತೆ,ಕಾಲೆಳೆಯುವುದೆನ್ನಲೇ?
ನಿಘಂಟಿನ ಎಲ್ಲಾ ಪದಗಳ ಅಣ್ಣನೆನ್ನಲೇ?
ಸ್ವಾರ್ಥದ ಪಾರಮಾವಾಧಿ,ಅವಕಾಶಗಳ ಕದಿಯುವ
ವಂಚಕ, ಧಗಾಕೋರರ ಕೈಚಳಕವೆನ್ನಲೇ?
Policy ಗಳ ದಿಕ್ಕನ್ನೇ ಬದಲಿಸುವ ಧೂರ್ತರೆನ್ನಲೇ?
ಎಲ್ಲವನ್ನೂ ಬಲ್ಲ,ಏನೂ ತಿಳಿದಿಲ್ಲದವರಂತೆ ನಟಿಸುವ
ಅಮಾಯಕ ಗೂಸುಂಬೆಗಳೆನ್ನಲೇ?

ಕಾಣದ ನಿರೀಕ್ಷೆ

ಕಾಣದ ನಿರೀಕ್ಷೆಗಳು  ಕದಡಿದೆ ಮನ 
ದಾರಿ ಕಾಣದೆ ತೊಳಲಾಡಿದೆ ಮನ
ನಿರೀಕ್ಷೆಗಳು ಮನದಲ್ಲಿ ಮೂಡಿಸಿವೆ
ಭಯಸಹಿತ ಪರೀಕ್ಷೆಯ ವಾತಾವರಣ
ಭರವಸೆಗಳೆಲ್ಲಾ ಹುಸಿಯಾಗುವ ಭ್ರಮೆ
ಮನದ ಶಾಂತತೆಯ ಕಡಲ ಕದಡಿದೆ
ಆದದ್ದು ಆಗಲಿ ನಿರ್ಲಿಪ್ತನಾಗುವೆಡೆ
ಮನದಲ್ಲಿ ಆತಂಕದ ಸಂಚಲನ ತಂದಿದೆ
ಗೂಸುಂಬೆಗಳ ತೆರದಿ ಬಣ್ಣ ಬದಲಿಸುವ
ದಿನದಿನದ ವರಸೆಗಳಿಂದ ಮನಸ್ಸು ನೊಂದಿದೆ
ಅನಿವಾರ್ಯತೆ ಎಲ್ಲಾ ಕಡೆಗಳಿಂದಲೂ
ದಾಳಿ ಮಾಡಿ ವಾಚ ಮನಸಾ ಹೆಳವನನ್ನಾಗಿಸಿದೆ
ಇರುವ ಹಾಗೆ ಮುರುಟಿದ ಮನದಲ್ಲೇ
ಸುಖಪಡುವ ಕುಂಟುನಾಯಿಯಾಗಿದೆ ಮನದ ಸ್ಥಿತಿ
ಗಿಡದಿಂದ ಬೇರಾದರೂ ಹೂವು ನಗುವ
ಸೂಸುವ ಪರಿ ಮನದ ಕತ್ತಲಲ್ಲಿ ಆಶಾಭಾವನೆ ಮೂಡಿದೆ

ಸುಪ್ರಭಾತ

ಏನಿದೇನಿದು ಹಕ್ಕಿಗಳ ಕಲರವ
ಶಬ್ದಾಡಂಬರದ ರವರವ
ಹರಿದಶ್ವದ ಪುಳಕದ ರಸಕೇಳಿ
ಭೂತಾಯಿಯ ಕೊಂಡಾಡು ಸುಪ್ರಭಾತಕೇಳಿ||

ವಿಳಾಸ ಹುಡುಕಿಕೊಡಿ

ವಿಳಾಸ ಹುಡುಕಿಕೊಡಿ
ಹತ್ತು ನಿಮಿಷದ ಹಿಂದೆ ಇಲ್ಲೆ ತಟಸ್ಥವಾಗಿತ್ತು
ನೂರಾರು ವರ್ಷಗಳ ಕಲರವ
ನಾಲ್ಕೈದು ತಲೆಮಾರುಗಳ ಒಡನಾಟ
ಪ್ರೀತಿ-ದ್ವೇಷ, ಸುಖ-ದುಃಖ 
ಉಕ್ಕುಕ್ಕಿ ಹರಿದ ಜೀವನಪ್ರೀತಿ
ಎಲ್ಲವೂ ಮಂಗಮಾಯ ಕ್ಷಣದ ಕಂಪನಕ್ಕೆ
ಒಡಹುಟ್ಟಿದವರ ನುಂಗಿತ್ತು ಭೂಮಿ
ಸೌಂಧರ್ಯದ ಗಣಿ ಈಗ ಸುಡುಗಾಡು
ಅವರವರಿಗೆ ಅವರ ಚಿಂತೆ
ನನ್ನ ಚಿಂತೆ ನನಗೆ
ಸುಡುಗಾಡಿನಲ್ಲಿ ಒಂಟಿ ಪಿಶಾಚಿ
ಹುಡುಕಾಡುತ್ತಿದ್ದೇನೆ ನನ್ನ ವಿಳಾಸ
ಪ್ಲೀಸ್ ಹುಡುಕಿಕೊಡಿ//

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...