Tuesday, February 10, 2015

ಕನಸು ಕಾಣೆಯಾಗಿದೆ!

ಕನಸುಗಳ ಕದ್ದಿದ್ದಾರೆ
ಯಾರಿಗೆ ದೂರು ಕೊಡಲಿ
ಹುಡುಕಿ ಕೊಡಿ ಎಂದು?
ಒಂದಲ್ಲ,ಎರಡಲ್ಲ ನೂರಾರು ಸ್ವಾಮಿ ಏನು ಮಾಡಲಿ?

ಪ್ರತಿದಿನ ಕಳೆದು ಕತ್ತಲಾಗುವುದಕ್ಕೆ
ಕಾಯುತ್ತಿದ್ದವನು ನಾನು
ಹುಣ್ಣಿಮೆ ಚಂದಿರನ ಬರುವಿಕೆಗೆ
ಶಾಪ ಹಾಕುತ್ತಿದ್ದವನು ನಾನು||

ಎಲ್ಲಿ ಹೋದವೋ ಆ ಕಾಲ?
ನಿಶ್ಚಿಂತೆಯಿಂದ ಕನಸ ಕಾಣುತ್ತಿದ್ದ ಆ ಕಾಲ
ಇಂದೇಕೋ ಮನದಲ್ಲಿ ದುಗುಡವಿದೆ
ಭಯ ಮಡುಗಟ್ಟಿದೆ ಕನಸ ಕಾಣಲು||

ಹೊಸ ಯುಗದ ಜಗವಿದು
ಕಾಣುವ ಕನಸನ್ನೂ ಕದಿಯುವವರ ಕಾಲವಿದು
ಯಾರು ಕದ್ದರೋ ನನ್ನ ಕನಸುಗಳ?
ಯಾವ ಠಾಣೆಯಲ್ಲಿ ದೂರು ಕೊಡಲಿ ಹೇಳಿ?

No comments:

Post a Comment

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...